ಈ ಕೆಲವು ದಿನಗಳು ಸಂಜೆಯ ಆಕಾಶದಲ್ಲಿ ಬರಿಗಣ್ಣಿಗೆ ನಾಲ್ಕು ಗ್ರಹಗಳು ಕಾಣುತ್ತಿವೆ. ಸೂರ್ಯಾಸ್ತವಾಗುತ್ತಿದ್ದಂತೆ ಪಶ್ಚಿಮದಲ್ಲಿ ದಿಗಂತಕ್ಕೆ ಸಮೀಪ ಶನಿ, ಸುಮಾರು 45 ಡಿಗ್ರಿ ಎತ್ತರದಲ್ಲಿ ಹೊಳೆಯುವ ಶುಕ್ರ, ನೆತ್ತಿಯ ಮೇಲೆ ಗುರು ಗ್ರಹ, ಪೂರ್ವ ಆಕಾಶದಲ್ಲಿ ಕೆಂಬಣ್ಣದಿಂದ ಆಕರ್ಷಿಸುವ ಮಂಗಳ ಕಾಣುತ್ತಿವೆ. ಜನವರಿ 10 ರಿಂದ ಪಶ್ಚಿಮ ಆಕಾಶದಲ್ಲಿ ಅತೀ ಎತ್ತರದಲ್ಲಿ 47 ಡಿಗ್ರಿಯಲ್ಲಿ ಹೊಳೆಯುವ ಶುಕ್ರ ನಮ್ಮನ್ನ ಆಕರ್ಷಿಸುತ್ತಲೇ ಇದೆ. ದಿನದಿಂದ ದಿನಕ್ಕೆ ಕೆಳ ಕೆಳಗೆ ದಿಗಂತದೆಡೆಗೆ ಗೋಚರಿಸುತ್ತಾ ಮಾರ್ಚ್ ಅಂತ್ಯದವರೆಗೂ ಪಶ್ಚಿಮದಲ್ಲಿ ಕಾಣಲಿದೆ.
ಸುಮಾರು ಎರಡು ವರ್ಷಕ್ಕೊಮ್ಮೆ 24 ಕೋಟಿ ಕಿಮೀಯಿಂದ 9 ಕೋಟಿ ಯವರೆಗೆ ಭೂಮಿಗೆ ಸಮೀಪವಾಗುವ ಮಂಗಳ, ಪೂರ್ವದಲ್ಲಿ ಈಗ ಕೆಂಬಣ್ಣದಲ್ಲಿ ಹೊಳೆಯುತ್ತಿದೆ. ಶುಕ್ರ ಗ್ರಹ ನಕ್ಷತ್ರದಂತೆ ಹೊಳೆಯುತ್ತಿದ್ದರೂ ದೂರದರ್ಶಕದಲ್ಲಿ ಈಗ ನೋಡಿದರೆ ಚೌತಿಯ ಚಂದ್ರನಂತೆ ಕಾಣುತ್ತಿದೆ.
ಅತೀ ಸುಂದರ ಮಿಥುನ ರಾಶಿ ಓರಿಯಾನ್, ಅಂಡ್ರೋಮಿಡಾ ಗೆಲಾಕ್ಸಿಗಳೊಂದಿಗೆ
ಆಕಾಶ ವೀಕ್ಷಕರಿಗೆ ಈಗಿನ ಸಂಜೆಯ ಆಕಾಶ ಬಹಳ ಯೋಗ್ಯ.
ಡಾ. ಎ.ಪಿ ಭಟ್ ಉಡುಪಿ.