Sunday, February 23, 2025
Sunday, February 23, 2025

ಜ. 19-21 ರವರೆಗೆ ನಾಟಕೋತ್ಸವ ಪ್ರದರ್ಶನ

ಜ. 19-21 ರವರೆಗೆ ನಾಟಕೋತ್ಸವ ಪ್ರದರ್ಶನ

Date:

ಉಡುಪಿ, ಜ.19: ಕಾರ್ಕಳ ಯಕ್ಷ ರಂಗಾಯಣ ಇವರ ವತಿಯಿಂದ ಜನವರಿ 19 ರಿಂದ 21 ರ ವರೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಬಯಲು ರಂಗಮಂದಿರದಲ್ಲಿ ‘ಕಲ್ಲರಳಿ ಹೂವಾಗಿ’ – ಮಕರಾಯನ ನಾಟಕೋತ್ಸವ ಹಾಗೂ ನಿರ್ದಿಗಂತ ಮತ್ತು ನೀನಾಸಮ್ ತಿರುಗಾಟದ ನಾಟಕದಾಟಗಳು ನಡೆಯಲಿವೆ. ನಾಟಕೋತ್ಸವವನ್ನು ಜನವರಿ 19 ರಂದು ಸಂಜೆ 6.15 ಕ್ಕೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಭಾಗವಹಿಸಲಿದ್ದಾರೆ. ಅಂದು ಸಂಜೆ 6.30 ಕ್ಕೆ ನಿರ್ದಿಗಂತ ಪ್ರಸ್ತುತ ಪಡಿಸುವ ‘ತಿಂಡಿಗೆ ಬಂದ ತುಂಡೇರಾಯ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಜ. 20 ರಂದು ಸಂಜೆ 4 ಗಂಟೆಗೆ ಅಕ್ಷರ ಕೆ.ವಿ. ಅವರೊಂದಿಗೆ ‘ಇಂದಿನ ನಾಟಕ ಮುಂದಿನ ನೋಟ’- ವಿಷಯದ ಕುರಿತು ರಂಗಸಂವಾದ, ಸಂಜೆ 6.30ಕ್ಕೆ ನೀನಾಸಮ್ ತಿರುಗಾಟದ ನಾಟಕ ‘ಮಾಲತೀಮಾಧವ’, ಜ. 21 ರಂದು ಸಂಜೆ 6.30 ಕ್ಕೆ ನೀನಾಸಮ್ ತಿರುಗಾಟದ ನಾಟಕ ‘ಅಂಕದ ಪರದೆ’ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!