Tuesday, December 31, 2024
Tuesday, December 31, 2024

ಕೊಕ್ಕರ್ಣೆ: ಆರೋಗ್ಯ ತಪಾಸಣಾ ಶಿಬಿರ

ಕೊಕ್ಕರ್ಣೆ: ಆರೋಗ್ಯ ತಪಾಸಣಾ ಶಿಬಿರ

Date:

ಕೊಕ್ಕರ್ಣೆ, ಡಿ.28: ಸ್ಪೂರ್ತಿ ಯುವ ವೇದಿಕೆ, ಕೋಟಂಬೈಲು ಮತ್ತು ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು, ಪ್ರಸಾದ್ ನೇತ್ರಾಲಯ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಕ್ಕರ್ಣೆ ಇವರ ಸಹಯೋಗದೊಂದಿಗೆ ಕೋಟಂಬೈಲು ಶ್ರೀ ಗೋಪಾಲಕೃಷ್ಣ ಮಠದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಶಿಬಿರವನ್ನು ಪುರೋಹಿತರಾದ ರಂಗನಾಥ್ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಪೂರ್ತಿ ಯುವ ವೇದಿಕೆಯ ಅಧ್ಯಕ್ಷರಾದ ವಿಘ್ನೇಶ್ ರಂಜಾಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡರಾದ ಗಿರೀಶ್ ಉಡುಪ, ವೆಂಕಟೇಶ ವಾಕುಡ, ಕೋಮಲಾ ರಾಘವೇಂದ್ರ ನಿಂಜೂರು, ಶಿವಾನಂದ ನಾಯಕ್, ಬಾಲಕೃಷ್ಣ ಉಡುಪ, ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ., ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇಲ್ಲಿನ ರಂಜನ್, ಪ್ರಸಾದ್ ನೇತ್ರಾಲಯದ ಡಾ. ಪ್ರತಿಭಾ, ಸೂರಾಲು ವಲಯದ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಅನಂತಪದ್ಮನಾಭ ವಾಕುಡ ಹಾಗೂ ವೆಂಕಟೇಶ ವಾಕುಡ ಕೋಟಂಬೈಲು, ರಾಘವೇಂದ್ರ ನಿಂಜೂರು ಕೋಟಂಬೈಲು, ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್, ಪುಷ್ಪಾ ಹಾಗೂ ಲ್ಯಾಬ್ ಟೆಕ್ನಿಶಿಯನ್ ಸುಕೇತ ಹಾಗೂ ಶುಶ್ರುಕಿಯರು ಹಾಗೂ ಪ್ರಸಾದ್ ನೇತ್ರಾಲಯದ ಪಿ.ಆರ್.ಓ. ಗಣೇಶ್ ಹಾಗೂ ಸಿಬ್ಬಂದಿ ವರ್ಗದವರು ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಕ್ಕರ್ಣೆ ಇಲ್ಲಿನ ಸಿಬ್ಬಂದಿ ವರ್ಗದವರು ಹಾಗೂ ಸ್ಪೂರ್ತಿ ಯುವ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ರಮೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ, ಚರ್ಮ ರೋಗ ಹಾಗೂ ಕಣ್ಣಿನ ಪೊರೆ ತಪಾಸಣೆ ನಡೆಸಲಾಯಿತು. ಸುಮಾರು 149 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. 43 ಜನರಿಗೆ ಇಸಿಜಿ, 25 ಜನರಿಗೆ ಪ್ಯಾಪ್ಸ್ಮಿಯರ್ ನಡೆಸಲಾಯಿತು ಹಾಗೂ 9 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ 42 ಜನರಿಗೆ ಉಚಿತ ಕನ್ನಡಕಕ್ಕೆ ಆಯ್ಕೆಯಾಗಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು: ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

ಕಾಪು, ಡಿ.30: ಕಾಪು ತಹಸೀಲ್ದಾರ ಕಚೇರಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ...

ಸಿಎಂ ಸಂಧಾನ; ಮುಷ್ಕರ ಕೈಬಿಟ್ಟ ಸಾರಿಗೆ ನೌಕರರು

ಬೆಂಗಳೂರು, ಡಿ.30: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ...

ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಬೆಂಗಳೂರು, ಡಿ.30: ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು...

ಮಂಜೂರಾತಿ ಪತ್ರ ಹಸ್ತಾಂತರ

ಕೋಟ, ಡಿ.30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್...
error: Content is protected !!