ಉಡುಪಿ, ಡಿ.27: ದಶಮಾನೋತ್ಸವ ಸಂಭ್ರಮದಲ್ಲಿರುವ ಹೋಂ ಡಾಕ್ಟರ್ ಫೌಂಡೇಶನ್(ರಿ.)
ಇದರ ವತಿಯಿಂದ 4ನೇ ವರ್ಷದ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಅಲೆವೂರು ಮಂಚಿಕೆರೆ ಪರಿಸರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 9 ಮಂದಿ ಆಶಕ್ತ ಮತ್ತು ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರಿಗೆ ಒಟ್ಟು 1.10 ಲಕ್ಷ ರೂ ಸಹಾಯಧನ ವಿತರಿಸಲಾಯಿತು. ಕೇರಿಯ ಜನರಿಗೆ ವಸ್ತ್ರದಾನ ಕಾರ್ಯಕ್ರಮ ನಡೆಯಿತು. ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನ, ಹಿರಿಯ -ಕಿರಿಯ ವ್ಯಕ್ತಿಗಳ ಮೂಲಕ ಕೇಕ್ ಕತ್ತರಿಸಿ ಭೋಜನ ವ್ಯವಸ್ಥೆ ಮಾಡಲಾಯಿತು.
ಸಂಸ್ಥೆಯ ಮುಖ್ಯಸ್ಥ ಡಾ.ಶಶಿಕಿರಣ್ ಶೆಟ್ಟಿ ಮಾತನಾಡುತ್ತಾ, ಕಳೆದ 4 ವರ್ಷಗಳಿಂದ ಅತ್ಯಂತ ವಿಶಿಷ್ಠವಾಗಿ ವಿವಿಧ ಧರ್ಮಗಳ ಹಬ್ಬಗಳ ಆಚರಣೆ ಸೇರಿದಂತೆ ಕಳೆದ 10 ವರ್ಷಗಳಲ್ಲಿ ಸುಮಾರು 2.5 ಕೋಟಿ ರೂ ಮೊತ್ತ ಸೇವಾ ಕಾರ್ಯಗಳನ್ನು ದಾನಿಗಳ ನೆರವಿನಿಂದ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಸುರೇಂದ್ರ ಪೂಜಾರಿ, ಬಂಗಾರಪ್ಪ, ಡಾ.ಸುಮಾ ಶೆಟ್ಟಿ, ಶಂಭು, ರವಿ ಕೊಳಲಗಿರಿ, ಉದಯ್ ನಾಯ್ಕ್, ರಾಘವೇಂದ್ರ ಪ್ರಭು ಕರ್ವಾ೯ಲು, ಆಶಾ ಕಾರ್ಯಕರ್ತರಾದ ಶ್ಯಾಮಲಾ, ಸವಿತ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.