Friday, December 27, 2024
Friday, December 27, 2024

ಸ್ಕ್ರೋಲಿಂಗ್ ಮೇಲೆ ನಿಗಾ ವಹಿಸಿ

ಸ್ಕ್ರೋಲಿಂಗ್ ಮೇಲೆ ನಿಗಾ ವಹಿಸಿ

Date:

ಡಿಜಿಟಲ್ ಗ್ಯಾಜೆಟ್ಸ್, ಆಪ್ಸ್, ಸೋಶಿಯಲ್ ಮೀಡಿಯಾ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳಿರಲಿ ವೃದ್ಧರಿರಲಿ ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ ಏನೋ ಕಳೆದಂತಹ ಅನುಭವ. ಕ್ಷಣ ಕ್ಷಣಕ್ಕೂ ಮೊಬೈಲ್ ನೋಡುವ ತವಕ ಹೆಚ್ಚುತ್ತಿದೆ. ರೀಲ್ಸ, ವಿಡಿಯೋಸ್ ಪೋಸ್ಟ್ಗಳು ಆಕರ್ಷಿಸುತ್ತಿದೆ. ಜ್ಞಾನದ ಭಂಡಾರವೇ ನಮ್ಮ ಮುಂದಿದೆ. ವಿವಿಧ ಕ್ಷೇತ್ರದ ತಿಳುವಳಿಕೆ ದೊರೆಯುತ್ತದೆ. ಒಂದು ರೀತಿ ಇದು ಒಳ್ಳೆಯದೆನಿಸಿದರೂ ನಮ್ಮ ಮನಸ್ಸಿನ ಮೇಲೆ ಅದು ಆಘಾತಕಾರಿಯಾಗಿ ಪರಿಣಮಿಸುತ್ತಿದೆ. ಇದಕ್ಕಿಂತ ದೊಡ್ಡ ಸಮಸ್ಯೆ ನಾವು ವೇಗವಾಗಿ ಒಂದು ವಿಡಿಯೋದಿಂದ ಇನ್ನೊಂದು ವಿಡಿಯೋ ಬೇಗ ಬೇಗ ಸ್ವೈಪ್ ಮಾಡುವುದರಿಂದ ಅನೇಕ ದುಷ್ಪರಿಣಾಮಗಳು ಕಂಡು ಬಂದಿದೆ.

ಹಿಂದೆ ನಾವು ನಮ್ಮ ಬುದ್ಧಿವಂತಿಕೆಯನ್ನು ಬಳಸಿ ಕೆಲಸ ಮಾಡಿದರೆ ಈಗ ಎಐ ಬಳಕೆ ನಮ್ಮ ಆಲೋಚನೆಗೆ ಧಕ್ಕೆ ತರುತ್ತಿದೆ. ನಾವು ಬುದ್ಧಿವಂತರಾಗುತ್ತಿದ್ದೇವೆ ಎಂಬ ಭ್ರಮೆ ಹುಟ್ಟಿಸುತ್ತದೆ. ತಿಳುವಳಿಕೆ ಹೆಚ್ಚಾಗಿದೆ ಆದರೆ ಆಲೋಚನೆ ಮಾಡುವ ಗ್ರಹಿಸುವ ಸಾಮರ್ಥ್ಯ ಕುಗ್ಗುತ್ತದೆ ಎಂದು ಸಂಶೋಧನೆಯಿಂದ ಕಂಡು ಬಂದಿದೆ. ಈ ರೀತಿ ಗಂಟೆಗಟ್ಟಲೆ ಒಂದು ವಿಡಿಯೋದಿಂದ ಇನ್ನೊಂದು ವಿಡಿಯೋಗೆ ಶಿಫ್ಟ್, ಸ್ವಪ್ ಮಾಡುತ್ತಿದ್ದರೆ ಮನಸ್ಸಿಗೆ ಗ್ರಹಿಸುವ ಅಡಚಣೆ ಉಂಟಾಗುವುದು. ನಂತರ ನಮಗೆ ಅದು ರೂಢಿಯಾಗಿ ಬಿಡುತ್ತದೆ. ಗ್ರಹಿಸುವ ಅಂದರೆ ಕಾನ್ಸಂಟ್ರೇಶನ್ ಶಕ್ತಿ ಕಮ್ಮಿ ಆಗುತ್ತದೆ. ಇದು ಮುಂದೆ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರುತ್ತದೆ. ನಮ್ಮ ಮನಸ್ಸಿನ ಕಾರ್ಯಕ್ಷಮತೆಯ ಮೇಲೆ ವಿಪರೀತ ಅಡಚಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸೋಶಿಯಲ್ ಮೀಡಿಯಾ ಅಥವಾ ಸ್ಕ್ರೀನ್ ಟೈಮ್ ಅನ್ನು ಆದಷ್ಟು ಕಡಿಮೆ ಮಾಡುವುದು ಹಿತಕರ. ಒಂದು ವಿಡಿಯೋವನ್ನು ಕೆಲವು ನಿಮಿಷಗಳ ಕಾಲ ನೋಡಿರಿ. ಆರಾಮದಲ್ಲಿ ವಿಡಿಯೋವನ್ನು ನೋಡಿ ವಿಷಯವನ್ನು ಗ್ರಹಿಸಿ, ವಿಶ್ಲೇಷಿಸಿ ಆನಂದಿಸಿ. ನಂತರ ಮುಂದಿನ ವಿಡಿಯೋವನ್ನು ವೀಕ್ಷಿಸಿ. ಐದೈದು ಹತ್ತತ್ತು ಸೆಕೆಂಡಿಗೆ ಸ್ವೈಪ್ ಮಾಡಬೇಡಿ. ಹೀಗೆ ಮಾಡುವುದರಿಂದ ಮನಸ್ಸಿಗೆ ವಿಪರೀತ ಒತ್ತಡ, ಗೃಹಣ ಹಾಗು ಧಾರಣ ಶಕ್ತಿ ಕುಂದುವುದು.

ಮೊಬೈಲ್ ದಿನಕ್ಕೆ ಇಷ್ಟೇ ಸಮಯವೆಂದು ಮೀಸಲಿಡಿ. ಮೊದಲಿಗೆ ಕಷ್ಟವಾದರೂ ಕ್ರಮೇಣ ಬಳಕೆಯನ್ನು ಕಡಿಮೆ ಮಾಡಿರಿ. ನಿಮಗೆ ಇಷ್ಟವಾದ ಒಳ್ಳೊಳ್ಳೆ ಹವ್ಯಾಸವನ್ನು ಬೆಳೆಸಿಕೊಳ್ಳಿ. ಓದುವುದು, ತೋಟಗಾರಿಕೆ, ಆರ್ಟ್, ಕ್ರಾಫ್ಟ್, ಅಡಿಗೆ ಹೊಲಿಯುವುದು, ನಕ್ಷತ್ರ ವೀಕ್ಷಣೆ, ಪರಿಸರದಲ್ಲಿ ಕಾಲ ಕಳೆಯುವುದು, ಬರೆಯುವುದು, ಯೋಗ, ಪ್ರಾಣಾಯಾಮ, ಧ್ಯಾನ ಇದೆಲ್ಲ ನಮ್ಮ ಮನಸ್ಸಿಗೆ ಆನಂದ ನೀಡುತ್ತದೆ.

ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು. ನಮ್ಮ ಸಮಯವನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದು ನಮಗೆ ಅರಿವು ಇರಬೇಕು. ನಾವು ಯಾವ ದಾರಿ ಹಿಡಿಯುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು. ಸೋಶಿಯಲ್ ಮೀಡಿಯಾ ಇನ್ನಿತರ ಸಾಮಾಜಿಕ ಜಾಲತಾಣದಿಂದ ನಮ್ಮ ಭಾವನೆಗಳು ಏರುಪೇರಾಗುತ್ತದೆ. ಆದ್ದರಿಂದ ಕಲಿಕೆಗೆ ಅಧಿಕ ಸಮಯ ಇಟ್ಟು ಮನರಂಜನೆಗೆ ಹಾಗೂ ಇತರರ ಪೋಸ್ಟ್ಗಳನ್ನು ವೀಕ್ಷಿಸುವುದು ಕಡಿಮೆ ಮಾಡಿ. ಒಂದು ವಿಡಿಯೋವನ್ನು ಆರಾಮಾಗಿ ನೋಡಿ. ಮಾನಸಿಕ ಆರೋಗ್ಯ ನಮ್ಮ ಕೈಯಲ್ಲಿದೆ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ- ಖಾತಾ ಪಡೆಯಲು ಐದು ದಾಖಲೆಗಳು ಕಡ್ಡಾಯ

ಬೆಂಗಳೂರು, ಡಿ.27: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ - ಖಾತಾ...

ಸಿ.ಎ ಅಂತಿಮ ಪರೀಕ್ಷೆ: ಜ್ಞಾನಸುಧಾ ಹಳೆ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ, ಡಿ.27: ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ - ಸಿ.ಎ ಅಂತಿಮ...

ಎನ್.ಸಿ.ಸಿ ಕೆಡೆಟ್‌ಗಳಿಗೆ ವಿವಿಧ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮ

ಉಡುಪಿ, ಡಿ.27: ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು ಉದ್ಯಮಶೀಲತೆ ಮತ್ತು...

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ರಜತ ಸಂಭ್ರಮದ ಪೋಸ್ಟರ್ ಬಿಡುಗಡೆ

ಬೆಳ್ಮಣ್, ಡಿ.27: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...
error: Content is protected !!