Wednesday, December 25, 2024
Wednesday, December 25, 2024

ರಾಜ್ಯ ಮಹಿಳಾ ನಿಲಯದ ನಿವಾಸಿನಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

ರಾಜ್ಯ ಮಹಿಳಾ ನಿಲಯದ ನಿವಾಸಿನಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

Date:

ಉಡುಪಿ, ಡಿ.24: ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಇವರ ಸಿ.ಎಸ್.ಆರ್ ನಿಧಿಯಿಂದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಂಸ್ಥೆಯವರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯ ರಾಜ್ಯ ಮಹಿಳಾ ನಿಲಯದ ನಿವಾಸಿನಿಯರಿಗೆ 21 ದಿನಗಳ ಸೀರೆಕುಚ್ಚು, ಎಂಬ್ರಾಯಿಡರಿ ಹಾಗೂ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಗರದ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ನಡೆಯಿತು. ರೋಬೋಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ (ಆಕೌಂಟ್ಸ್) ಕೃಷ್ಣರಾಜ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಮಾನವ ಸಂಪನ್ಮೂಲದ ಮೇಲೆ ಮಾಡುವ ಹೂಡಿಕೆಯು ದೀರ್ಘಕಾಲದ ಫಲಿತಾಂಶ ನೀಡುತ್ತದೆ ಎಂದ ಅವರು, ತರಬೇತಿಯ ಪ್ರಯೋಜನವನ್ನು ನಿವಾಸಿನಿಯರು ಪಡೆಯುವಂತೆ ತಿಳಿಸಿದರು. ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ, ತರಬೇತಿಯ ಮಹತ್ವ ತಿಳಿಸುತ್ತಾ ನಿವಾಸಿನಿಯರು ಸಂಸ್ಥೆಯಿಂದ ಹೊರಗಡೆ ಹೋಗಿ ಬದುಕಲು ಸಹಾಯಕವಾಗುವುದರಿಂದ ಎಲ್ಲರೂ ತರಬೇತಿ ಪಡೆಯುವಂತೆ ಹುರಿದುಂಬಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ. ಕೆ., ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನಿ, ಸಂಸ್ಥೆಯ ಅಧೀಕ್ಷಕಿ ಪುಷ್ಪಾರಾಣಿ ಹೆಚ್., ಸಂಪನ್ಮೂಲ ವ್ಯಕ್ತಿಗಳಾದ ರಮ್ಯ ಎ.ಸಿ. ಮುಕ್ತ ಶ್ರೀನಿವಾಸ, ಸನ್ನಿಹಿತ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ನಿವಾಸಿನಿಯರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರ್ನಾಟಕ ಕ್ರೀಡಾಕೂಟ-2025 ಲಾಂಛನ ಬಿಡುಗಡೆ

ಬೆಂಗಳೂರು, ಡಿ.24: ಕರ್ನಾಟಕ ಕ್ರೀಡಾಕೂಟ-2025ರ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಬಳಿಕ...

ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಪ್ರತೀಕ: ಪ್ರಶಾಂತ ನೀಲಾವರ

ಉಡುಪಿ, ಡಿ.24: ವಿಶ್ವದ ಚರಿತ್ರೆಯಲ್ಲಿ ಮಾನವ ಹಕ್ಕುಗಳ ಹೋರಾಟಕ್ಕೆ ಬಹುದೊಡ್ಡ ಇತಿಹಾಸವಿದೆ....

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕೋಟ, ಡಿ.24: ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವ...

ಹಿರಿಯಡಕ: ಆದೇಶ ಪತ್ರಗಳ ವಿತರಣೆ

ಹಿರಿಯಡಕ, ಡಿ.24: ರಾಜೀವ ಗಾಂಧಿ ವಸತಿ ನಿಗಮದಿಂದ ಕೊರಗ ಸಮುದಾಯದ 10...
error: Content is protected !!