ತುಮಕೂರು, ಡಿ.23: ಕಲ್ಪತರು ನಾಡು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿಮಾತೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಅಮ್ಮನವರ ನೂತನ ಶಿಲಾಮಯ ದೇವಾಲಯದ ಕಟ್ಟಡದ ಮಾದರಿ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಜರುಗಿತು. ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ರವರು ಮಾದರಿಯನ್ನು ಬಿಡುಗಡೆಗೊಳಿಸಿ ಇದೊಂದು ವಿಶೇಷ ಮಾದರಿಯ ದೇವಾಲಯ. ಪುನರ್ ನಿರ್ಮಾಣವಾಗುತ್ತಿರುವುದು ಬಹಳ ಸಂತೋಷದ ಸಂಗತಿ. ಇದೊಂದು ಪುಣ್ಯ ಕ್ಷೇತ್ರವಾಗಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುವ ಕ್ಷೇತ್ರವಾಗಲಿ ಎಂದು ಶುಭ ಹಾರೈಸಿದರು. ಸ್ವಾಮೀಜಿಯವರನ್ನು ದೇವಾಲಯದ ವತಿಯಿಂದ ಫಲ ಪುಷ್ಪ, ಕಂಬಳಿ ಕೊಬ್ಬರಿ ನೀಡಿ ಗೌರವಿಸಲಾಯಿತು. ದೇವಾಲಯದ ಧರ್ಮದರ್ಶಿ ರಂಗಸ್ವಾಮಿ ಸಿ.ಎನ್., ರಾಯರ ರಂಗಮಂದಿರದ ಮುಖ್ಯಸ್ಥ ಪ್ರಕಾಶ್, ರಂಗರಾಜು, ಆಡಳಿತ ಮುಖ್ಯಸ್ಥರಾದ ಲಕ್ಷ್ಮೀಶ ಸಿ ಆರ್., ಉಪಾಧ್ಯಕ್ಷರಾದ ನಾಗರತ್ನ, ರವಿಕುಮಾರ್, ಮುಂತಾದವರು ಉಪಸ್ಥಿತರಿದ್ದರು.
ಮಂತ್ರಾಲಯದಲ್ಲಿ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ನೂತನ ಶಿಲಾಮಯ ಕಟ್ಟಡದ ಮಾದರಿ ಬಿಡುಗಡೆ
ಮಂತ್ರಾಲಯದಲ್ಲಿ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ನೂತನ ಶಿಲಾಮಯ ಕಟ್ಟಡದ ಮಾದರಿ ಬಿಡುಗಡೆ
Date: