ಉಡುಪಿ, ಡಿ.24: ಭಾರತೀಯ ದಂತ ವೈದ್ಯರ ಸಂಘ ಇದರ ಪದಗ್ರಹ ಸಮಾರಂಭವು ಭಾನುವಾರದಂದು ನಡೆಯಿತು. ಅಧ್ಯಕ್ಷರಾಗಿ ಡಾ. ಯು ಬಿ ಶಬರಿ, ಕಾರ್ಯದರ್ಶಿಯಾಗಿ ಡಾ ಅತುಲ್ ಯು.ಆರ್., ಹಾಗೂ ಕೋಶಾಧಿಕಾರಿಯಾಗಿ ಡಾ. ತೇಜಕಿರಣ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.
ಡಾ. ಶಬರಿ ಮುಂದಿನ ಸಾಲಿನ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸಮಾರಂಭದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿ ಎಸ್ ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ಡಾ. ಜಗದೀಶ್ ಜೋಗಿ , ಪದಗ್ರಹಣ ಅಧಿಕಾರಿ ಡಾ. ಗುರುರಾಜ್ ಕೆ., ಡಾ ಪ್ರಮೋದ್ ಶೆಟ್ಟಿ , ಡಾ. ರೋಷನ್ ಶೆಟ್ಟಿ, ಡಾ. ವಿಜೇಶ್ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಡಾ. ಅತುಲ್ ಯು ಆರ್ ವಂದಿಸಿದರು.