ಉಡುಪಿ, ಡಿ.23: (ಉಡುಪಿ ಬುಲೆಟಿನ್ ವಿಶೇಷ ವರದಿ) ಸುಗಮ ಸಂಚಾರಕ್ಕೆ ಜಾಗ ಸಾಕಾಗುವುದಿಲ್ಲ ಎಂದು ರಸ್ತೆಯನ್ನು ಅಗಲೀಕರಣಗೊಳಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ವರ್ಷಗಟ್ಟಲೆ ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸದ ಕಾರಣ ಆ ಭಾಗದಲ್ಲಿ ವಾಹನ (ಮುಖ್ಯವಾಗಿ ದ್ವಿಚಕ್ರ ವಾಹನಗಳು) ಚಲಾಯಿಸಲು ಆಗದೇ ಸ್ಕಿಡ್ ಆಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಹೌದು, ಇದು ಉಡುಪಿ ಸಂತೆಕಟ್ಟೆಯ ಆಶೀರ್ವಾದ ಚಿತ್ರಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಲೇ ಪಕ್ಕದಲ್ಲಿರುವ ಪೆಟ್ರೋಲ್ ಪಂಪ್ ವರೆಗಿನ ರಸ್ತೆಯ ಸ್ಥಿತಿ. ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಇಂತಹ ಗಂಭೀರ ವಿಚಾರ ಕಣ್ಣಿಗೆ ಬೀಳದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಹೆದ್ದಾರಿಯ ಮೇಲೆ ಹರಡಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸಲು ಮನಸ್ಸು ಮಾಡುವರೇ? ಕಾದು ನೋಡಬೇಕಾಗಿದೆ.