Monday, December 23, 2024
Monday, December 23, 2024

ಕೊಡವೂರು ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಅಭಿನಂದನೆ

ಕೊಡವೂರು ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಅಭಿನಂದನೆ

Date:

ಉಡುಪಿ, ಡಿ.23: ನಾರಾಯಣ ಬಲ್ಲಾಳ್ ರವರಿಗೆ ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನಾ ಕಾರ್ಯಕ್ರಮ ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿಯವರು ವಾಣಿಜ್ಯ ಸಂಸ್ಥೆಗಳಿಗಿಂತ ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಅಗತ್ಯತೆಗಳಿಗೆ ಬಹು ವೇಗವಾಗಿ, ಉತ್ತಮವಾಗಿ ಸ್ಪಂದಿಸಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಪರಿಹಾರ ನೀಡುವ ಕಾರಣ ಇದೀಗ ಸಹಕಾರಿ ಕ್ಷೇತ್ರ ಉತ್ತುಂಗದಲ್ಲಿದೆ. ಅದಕ್ಕೆ ನಾರಾಯಣ ಬಲ್ಲಾಳ್ ರಂತಹ ಸಹಕಾರಿ ಧುರೀಣರು ಹಾಗೂ ಸಿಬ್ಬಂದಿಗಳು ಕಾರಣ ಎಂದು ಶ್ಲಾಘಿಸಿದರು. ತಮ್ಮ ಹುಟ್ಟೂರಲ್ಲಿಯೇ ಆತ್ಮೀಯರ ಮಧ್ಯೆ ಇಂತಹ ಸನ್ಮಾನ ಅರ್ಥಪೂರ್ಣ ಎಂದರು.

ಸಹಕಾರಿ ಧುರೀಣ ಮೋಹನ ಉಪಾಧ್ಯ, ಖ್ಯಾತ ದಸ್ತಾವೇಜು ಬರಹಗಾರ ರತ್ನಕುಮಾರ್, ಅಭಿನಂದನಾ ಸಮಿತಿಯ ಅಧ್ಯಕ್ಷ ಸಾಧು ಸಾಲಿಯನ್, ಅಶೋಕ್ ಕುಮಾರ್ ಮೆರ್ಮಾಡಿ, ಅರುಣ್ ಕುಮಾರ್ ಶೆಟ್ಟಿ, ನಾಗರತ್ನ ಬಲ್ಲಾಳ್, ಹರೀಶ್ ಕೊಡವೂರು, ದೀಪಕ್ ಕೊಡವೂರು, ಸಂದೇಶ್, ಜೀವನ್ ಕುಮಾರ್ ಪಾಳೆಕಟ್ಟೆ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.

ಸಾಹಿತಿ ಪೂರ್ಣಿಮಾ ಜನಾರ್ದನ್ ಅಭಿನಂದನ ಮಾತುಗಳನ್ನು ಆಡಿದರು. ನಗರಸಭಾ ಸದಸ್ಯ ಹಾಗೂ ಅಭಿನಂದನಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾತ್ ಕೊಡವೂರು ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಶೃತಿ ಸುಕುಮಾರ್ ಪ್ರಾರ್ಥಿಸಿದರು. ಸತೀಶ್ ಕೊಡವೂರು ನಿರೂಪಿಸಿದರು. ಅಭಿನಂದನಾ ಸಭಾ ಕಾರ್ಯಕ್ರಮದ ಬಳಿಕ ರಂಗ ತರಂಗ ಕಾಪು ವತಿಯಿಂದ ಕುಟ್ಟಿಯಣ್ಣನ ಕುಟುಂಬ ಸಾಮಾಜಿಕ ನಾಟಕ ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ: ಪ್ರವಾಸಿ ಸ್ಥಳಗಳಿಗೆ ಹಾಗೂ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಜೀವ ರಕ್ಷಣೆ ಕುರಿತು ಮಾಹಿತಿ

ಉಡುಪಿ, ಡಿ.23: ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ಹಾಗೂ ಶಾಲಾ...

ಉದ್ದಿಮೆದಾರರು ಜಿಲ್ಲೆಯಲ್ಲಿ ಕಿರು ಉದ್ಯಮಗಳ ಸ್ಥಾಪನೆಗೆ ಮುಂದಾಗಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ, ಡಿ.23: ರೈತರನ್ನು ಉದ್ಯಮಿಗಳನ್ನಾಗಿ ಮಾಡಿ, ಅವರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ,...

ರಾಷ್ಟ್ರೀಯ ಹೆದ್ದಾರಿಯಲ್ಲೇ ಮಣ್ಣಿನ ರಾಶಿ; ನಿರ್ಲಕ್ಷ್ಯದ ಪರಮಾವಧಿಗೆ ಇದೇ ಸಾಕ್ಷಿ

ಉಡುಪಿ, ಡಿ.23: (ಉಡುಪಿ ಬುಲೆಟಿನ್ ವಿಶೇಷ ವರದಿ) ಸುಗಮ ಸಂಚಾರಕ್ಕೆ ಜಾಗ...

ಉಡುಪಿ: ಡಿ.24 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ, ಡಿ.24: ದುರಸ್ಥಿ ಕಾರ್ಯದ ಪ್ರಯುಕ್ತ ಮೆಸ್ಕಾಂ ವತಿಯಿಂದ ಹಿರಿಯಡ್ಕ ಸಬ್‌ಸ್ಟೇಶನ್‌ನಲ್ಲಿ...
error: Content is protected !!