Thursday, December 19, 2024
Thursday, December 19, 2024

ಶ್ರೀ ನಂದಿಕೇಶ್ವರ ಗೆಳೆಯರ ಬಳಗ: 13ನೇ ವರ್ಷದ ಯಕ್ಷಸಂಭ್ರಮ

ಶ್ರೀ ನಂದಿಕೇಶ್ವರ ಗೆಳೆಯರ ಬಳಗ: 13ನೇ ವರ್ಷದ ಯಕ್ಷಸಂಭ್ರಮ

Date:

ಕೋಟ, ಡಿ.18: ಸಂಘಟನೆಗಳು ಸದೃಢವಾಗಿ ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳು ಸುಭಿಕ್ಷೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು. ಕೋಟತಟ್ಟು ಪಡುಕರೆ ನಂದಿಕೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು-ಪಡುಕರೆ ಇದರ 13ನೇ ವರ್ಷದ ಯಕ್ಷಸಂಭ್ರಮ, ಸಂಘದ ಸ್ವಂತ ಸ್ಥಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿಯಲ್ಲಿ ಸಂಘಸಂಸ್ಥೆಗಳ ಪಾತ್ರ ಗಣನೀಯವಾದದ್ದು ಈ ದಿಸೆಯಲ್ಲಿ ನಂದಿಕೇಶ್ವರ ಗೆಳೆಯರ ಬಳಗ ಸ್ವಂತ ತಳಹದಿಯಲ್ಲಿ ನಿಂತು ಸಮಾಜದ ಒರೆಕೋರೆಗಳನ್ನು ತಿದ್ದುವ ವೇದಿಕೆಯಾಗಲಿ ಎಂದು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ನಂದಿಕೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ರವೀಂದ್ರ ತಿಂಗಳಾಯ, ಅಶ್ವಿನಿ ದಿನೇಶ್, ನಂದಿಕೇಶ್ವರ ಗೆಳೆಯರ ಬಳಗದ ಗೌರವಾಧ್ಯಕ್ಷ ರಘು ತಿಂಗಳಾಯ, ಗದ್ದೆ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಕಾರಂತ್ ಉಪಸ್ಥಿತರಿದ್ದರು. ಸದಸ್ಯರಾದ ಮಂಜುನಾಥ ಭಂಡಾರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಇವರಿಂದ ಯಕ್ಷಗಾನ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ವಿರಚಿತ ಪ್ರಶ್ನಾರ್ಥಕ ಯಕ್ಷಗಾಮ ಪ್ರಸಂಗ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ನವೀನ್ ಸಾಲಿನ್ಸ್ ಅವರಿಗೆ ಲ್ಯಾಂಕಾಸ್ಟರ್ ವಿವಿಯ ಗೌರವ

ಮಣಿಪಾಲ, ಡಿ.18: ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಡಿಸೆಂಬರ್ ನಲ್ಲಿ ನಡೆದ ಪದವಿ...

ಗೃಹರಕ್ಷಕ ದಳದವರ ಉತ್ತಮ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ

ಉಡುಪಿ, ಡಿ.18: ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ...

ಜನವರಿ 10 ರಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಾಹನ ಬಳಕೆಗೆ ಅನುವು ಮಾಡಿಕೊಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಡಿ.18: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು...

ಬಾಂಧವ್ಯ ಫೌಂಡೇಶನ್: ಮನೆ ಹಸ್ತಾಂತರ

ಕೋಟ, ಡಿ.18: ಬಾಂಧವ್ಯ ಫೌಂಡೇಶನ್ ಕರ್ನಾಟಕ ಇವರ ನೆರಳು ಯೋಜನೆಯಿಂದ ೧೨ನೇ...
error: Content is protected !!