Wednesday, December 18, 2024
Wednesday, December 18, 2024

ಕೇಂದ್ರೀಯ ವಿದ್ಯಾಲಯದಿಂದ ಶಿಸ್ತು: ಜಿ.ಪಂ. ಸಿಇಓ ಪ್ರತೀಕ್ ಬಾಯಲ್

ಕೇಂದ್ರೀಯ ವಿದ್ಯಾಲಯದಿಂದ ಶಿಸ್ತು: ಜಿ.ಪಂ. ಸಿಇಓ ಪ್ರತೀಕ್ ಬಾಯಲ್

Date:

ಉಡುಪಿ, ಡಿ.17: ವಿದ್ಯಾರ್ಥಿಗಳಲ್ಲಿ ಶಿಸ್ತು, ಶೈಕ್ಷಣಿಕ ಕಠಿಣತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಕೆವಿಎಸ್ ಪಾತ್ರ ಮಹತ್ವವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್ ಹೇಳಿದರು. ಅವರು ಅಲೆವೂರು ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ 62 ನೇ ಕೆವಿಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೆವಿಎಸ್ ವಿದ್ಯಾರ್ಥಿಯಾದ ತಾನು ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಕೇಂದ್ರೀಯ ವಿದ್ಯಾಲಯದಿಂದ ಪಡೆದ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ದೊಡ್ಡ ಕನಸು ಕಾಣುವಂತೆ ಮತ್ತು ಅದನ್ನು ನನಸು ಮಾಡಿಕೊಳ್ಳಲು ಪರಿಶ್ರಮ ಪಡುವಂತೆ ಪ್ರೇರೇಪಿಸಿದರು. 

ಪ್ರಾಂಶುಪಾಲ ಕರೀಂ ಖಾನ್ ಸ್ವಾಗತಿಸಿ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಕೆವಿಎಸ್‌ನ ಪಾತ್ರ, ಪರಂಪರೆ ಮತ್ತು ಸಾಧನೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಕಾರ್ಯಕ್ರಮಗಳು ಮತ್ತು ಭಾಷಣ ನಡೆಯಿತು. ಪ್ರಾಥಮಿಕ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ನಡೆಯಿತು. 2023-24ರ ಸಿ.ಬಿ.ಎಸ್.ಇ ಬೋರ್ಡ್ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಚಂದನಾ ಮತ್ತು ನಾಗಾರ್ಜುನ ಅವರ ಗಮನಾರ್ಹ ಸಾಧನೆಗಾಗಿ ಅವರನ್ನು ಅಭಿನಂದಿಸಲಾಯಿತು. ಶಿಕ್ಷಕ ರಾಗೇಶ್ ಎಂ ವಂದಿಸಿದರು. ಶಿಕ್ಷಕಿ ರಿತು ಶರ್ಮಾ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆ ಮಂಡನೆ

ನವದೆಹಲಿ, ಡಿ.17: ಸಂಸತ್ತಿನಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆ'ಯನ್ನು ಮಂಗಳವಾರ...

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ

ಕೋಟ, ಡಿ.17: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ....

ಎಸ್.ವಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟ

ಗಂಗೊಳ್ಳಿ, ಡಿ.17: ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳುವ ಪಂದ್ಯಾಟಗಳು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಗಳನ್ನು...

ಉಡುಪಿ: ಖಾಯಂ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ, ದಿನಾಂಕ ನಮೂದಿಸುವುದು ಕಡ್ಡಾಯ

ಉಡುಪಿ, ಡಿ.17: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಖಾಯಂ ಜಾಹೀರಾತು ಫಲಕಗಳಲ್ಲಿ...
error: Content is protected !!