Wednesday, December 18, 2024
Wednesday, December 18, 2024

ಎಸ್.ವಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟ

ಎಸ್.ವಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟ

Date:

ಗಂಗೊಳ್ಳಿ, ಡಿ.17: ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳುವ ಪಂದ್ಯಾಟಗಳು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಗಳನ್ನು ಮಾಡುವಲ್ಲಿ ಬಹಳ ದೊಡ್ಡ ಪ್ರೇರಣೆಯನ್ನು ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗೊಳ್ಳಿಯ ಉದ್ಯಮಿ ವಿಠಲ ಶೆಣೈ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಎಸ್.ವಿ.ಪಿ.ಎಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿ.ಎಸ್‌.ವಿ.ಎಸ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಸಂಚಾಲಕರಾದ ಸದಾಶಿವ ನಾಯಕ್ ಎನ್., ಜಿ.ಎಸ್. ವಿ.ಎಸ್ ಅಸೋಸಿಯೇಷನ್ ಖಜಾಂಜಿ ಅಶ್ವಿನ್ ನಾಯಕ್, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್, ಉಪನ್ಯಾಸಕಿ ಸುಗುಣ ಆರ್. ಕೆ., ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯ ಹಮ್ಮಿಕೊಂಡ ವಿವಿಧ ಕ್ರೀಡಾಕೂಟಗಳ ಯಶಸ್ವಿಗೆ ಶ್ರಮಿಸಿದ ವಿವಿಧ ಕ್ರೀಡಾಳುಗಳನ್ನು ಅಭಿನಂದಿಸಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಉಪನ್ಯಾಸಕರಾದ ದೀಕ್ಷಿತ್ ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸೂರಜ್ ಸಾರಂಗ ಸ್ವಾಗತಿಸಿ, ಶ್ರೇಯಲ್ ವಂದಿಸಿದರು. ಸುಶ್ಮಿತಾ ಗಾಣಿಗ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆ ಮಂಡನೆ

ನವದೆಹಲಿ, ಡಿ.17: ಸಂಸತ್ತಿನಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆ'ಯನ್ನು ಮಂಗಳವಾರ...

ಕೇಂದ್ರೀಯ ವಿದ್ಯಾಲಯದಿಂದ ಶಿಸ್ತು: ಜಿ.ಪಂ. ಸಿಇಓ ಪ್ರತೀಕ್ ಬಾಯಲ್

ಉಡುಪಿ, ಡಿ.17: ವಿದ್ಯಾರ್ಥಿಗಳಲ್ಲಿ ಶಿಸ್ತು, ಶೈಕ್ಷಣಿಕ ಕಠಿಣತೆ ಮತ್ತು ನಾಯಕತ್ವದ ಗುಣಗಳನ್ನು...

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ

ಕೋಟ, ಡಿ.17: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಡಾ....

ಉಡುಪಿ: ಖಾಯಂ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ, ದಿನಾಂಕ ನಮೂದಿಸುವುದು ಕಡ್ಡಾಯ

ಉಡುಪಿ, ಡಿ.17: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಖಾಯಂ ಜಾಹೀರಾತು ಫಲಕಗಳಲ್ಲಿ...
error: Content is protected !!