ಕೋಟ, ಡಿ.16: ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ನೇತೃತ್ವದಲ್ಲಿ ಕಾರ್ಕಡ ಗ್ರಾಮಸ್ಥರ ಮೂಲಕ ಸಂಗ್ರಹಿಸಿದ ಎರಡು ಲೋಡ್ ಒಣಮೇವುನ್ನು ಭಾನುವಾರ ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ಹಸ್ತಾಂತರಿಸಿದರು. ಗೋಶಾಲೆಯ ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರು ಮಾತನಾಡುತ್ತಾ, ಗೆಳೆಯರ ಬಳಗದ ಸದಸ್ಯರಿಗೆ ಗೋವಿನ ಮೇಲಿರುವ ಪ್ರೀತಿ – ಭಕ್ತಿ ಅವರ ಈ ಸೇವೆಗೆ ಸಾಕ್ಷಿ. ಈ ಕಾರ್ಯಕ್ಕೆ ಗೋಮಾತೆ ಮತ್ತು ಶ್ರೀ ಕೃಷ್ಣ ಮುಖ್ಯಪ್ರಾಣರು ಅನುಗ್ರಹಿಸಲಿ ಎಂದರು. ಗೋ ಶಾಲೆಯ ವಿಶ್ವಸ್ಥ ಮಂಡಳಿಯ ಸಿ.ಎ ರವಿರಾವ್, ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ ಕೆ. ಶೀನ, ಕೆ. ಜಗದೀಶ ಆಚಾರ್ಯ,ಕೆ. ಶೇಖರ ಬಡಾಹೋಳಿ, ಹಾಗೂ ಕೆ. ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಗೆಳೆಯರ ಬಳಗ ಕಾರ್ಕಡ: ಗೋಶಾಲೆಗೆ ಒಣಮೇವು ಹಸ್ತಾಂತರ
ಗೆಳೆಯರ ಬಳಗ ಕಾರ್ಕಡ: ಗೋಶಾಲೆಗೆ ಒಣಮೇವು ಹಸ್ತಾಂತರ
Date: