Thursday, December 12, 2024
Thursday, December 12, 2024

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ಗೆ ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಕನ್ನಡ ಕಾಯಕ ರತ್ನ ಜಿಲ್ಲಾ ಪ್ರಶಸ್ತಿ

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ಗೆ ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಕನ್ನಡ ಕಾಯಕ ರತ್ನ ಜಿಲ್ಲಾ ಪ್ರಶಸ್ತಿ

Date:

ಬೆಳ್ಮಣ್, ಡಿ.9: ಕಾರ್ಕಳ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಇವರು ಪ್ರಯೋಜಿಸಿದ ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ‘ಕನ್ನಡ ಕಾಯಕ ರತ್ನ’ ಉಡುಪಿ ಜಿಲ್ಲಾ ಅತ್ಯುತ್ತಮ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ಗೆ ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಕಾರ್ಕಳ ತಾಲೂಕು
ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಿ ಗೌರವಿಸಿದರು. ಪ್ರಶಸ್ತಿಯ ಜೊತೆಗೆ ರೂ. 10,000/- ಮೊತ್ತ ಚೆಕ್ ನೀಡಿ ಗೌರವಿಸಿದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಘವು ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡದಲ್ಲದೇ ನಿರಂತರ ಶೈಕ್ಷಣಿಕ ಸಾಮಾಜಿಕ ಚಟುವಟಿಕೆಯ ಮೂಲಕ ಊರಿನ ಅಭಿಮಾನವನ್ನು ಪಡೆದ ಹೆಮ್ಮೆಯ ಸಂಘವಾಗಿದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ
ಹೇಳಿದರು.

ಶಾಸಕ ವಿ. ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು, ಸಮಾರಂಭದ ವೇದಿಕೆಯಲ್ಲಿ ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗುಣಪಾಲ ಕಡಂಬ, ರವೀಂದ್ರ ಶೆಟ್ಟಿ ಬಜಗೋಳಿ, ಅರುಣ್ ಕುಮಾರ್ ನಿಟ್ಟೆ, ಕೆ.ಬಿ. ಕೀರ್ತನ್ ಕುಮಾರ್, ರಾಜೇಂದ್ರ ಭಟ್ ಮೊದಲಾದವರಿದ್ದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಸಂಘದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಜೊತೆ ಕಾರ್ಯದರ್ಶಿ ಅನ್ನಪೂರ್ಣ ಕಾಮತ್, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಸದಸ್ಯರಾದ ವೀಣಾ ಪೂಜಾರಿ, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ವೀಣಾ ಆಚಾರ್ಯ, ಪ್ರದೀಪ್ ಸುವರ್ಣ ಮೊದಲಾದವರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದ್ರಾಳಿ ರುದ್ರಭೂಮಿಗೆ ಅಂತ್ಯಸಂಸ್ಕಾರ ಧಾಮ

ಉಡುಪಿ, ಡಿ.12: ಮಣಿಪಾಲ್ ಟೌನ್ ರೋಟರಿ ಕ್ಲಬ್ ನ ದಶಮಾನೋತ್ಸವ ಸಂದರ್ಭದಲ್ಲಿ...

ನಮ್ಮ ಮನಸ್ಸು ನಮ್ಮ ಬೆಸ್ಟ್ ಫ್ರೆಂಡ್

ಅಮ್ಮ ಬೈದಳು ಎಂದು ದುಃಖದಲ್ಲಿದ್ದ ಅಖಿಲ ತನ್ನ ರ್‍ಯಾಂಕ್ ಸುದ್ದಿ ಕೇಳಿ...

ಪ್ರೌಢಶಾಲಾ ಸಹಶಿಕ್ಷಕರ ಬಡ್ತಿ ಪ್ರಕ್ರಿಯೆ ಫೆಬ್ರವರಿ ಅಂತ್ಯದೊಳಗೆ ಪೂರ್ಣ

ಬೆಳಗಾವಿ, ಡಿ.12: ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ...

ಕೆ.ಎಂ.ಸಿ: 15 ನೇ ವರ್ಷದ ಕ್ರಿಸ್ಟಲ್ ಜುಬಿಲಿ ಆಚರಣೆ

ಮಣಿಪಾಲ, ಡಿ.12: ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗ ಮತ್ತು ಹೃದಯರಕ್ತನಾಳದ ತಂತ್ರಜ್ಞಾನ...
error: Content is protected !!