ಮಣಿಪಾಲ, ಅ.22: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಈ ಕೆಳಗಿನ ತರಬೇತಿ ಕಾರ್ಯಕ್ರಮಗಳನ್ನು 18 ರಿಂದ 45 ವರ್ಷ ವಯೋಮಿತಿಯ ಮಹಿಳೆಯರು/ಯುವತಿಯರಿಗಾಗಿ ಆಯೋಜಿಸಲು ನಿರ್ಧರಿಸಲಾಗಿದ್ದು ಆಸಕ್ತರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಶಿಬಿರಾರ್ಥಿಗಳಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ಊಟೋಪಚಾರ ವ್ಯವಸ್ಥೆ ಒದಗಿಸಲಾಗುವುದು. ಫ್ಯಾಷನ್ ರವಿಕೆಗಳ ಹೊಲಿಗೆ, ಆರಿ ಎಂಬ್ರಾಯ್ಡರಿ ಮತ್ತು ಸಾರಿ ಕುಚ್ಚು ತರಬೇತಿ (21 ದಿನಗಳು), ಕೃತಕ ಆಭರಣಗಳು ಮತ್ತು ಅಲಂಕಾರ ಕರಕುಶಲ ವಸ್ತುಗಳ ತಯಾರಿ ತರಬೇತಿ (10 ದಿನಗಳು), ಹೋಮ್ ಮೇಡ್ ಚಾಕೋಲೇಟ್ ಮತ್ತು ಬೇಕರಿ ತಿನಿಸುಗಳ ತಯಾರಿಕೆ ಹಾಗು ಗೃಹ ಉತ್ಪನ್ನಗಳ ತರಬೇತಿ (7 ದಿನಗಳು), ತೋಟಗಾರಿಕೆ ತರಬೇತಿ (ಕಿಚನ್ ಗಾರ್ಡನ್, ತಾರಸಿ ಕೈತೋಟ, ಕಸಿ ಕಟ್ಟುವುದು ಮತ್ತು ನರ್ಸರಿ- 3 ದಿನಗಳು), ವಿದ್ಯುತ್ ದ್ವಿಚಕ್ರ ವಾಹನ, ಪೆಟ್ರೋಲ್ ದ್ವಿ ಚಕ್ರ ವಾಹನಗಳ ದುರಸ್ತಿ, ವಿದ್ಯುತ್ ಗೃಹೋಪಯೋಗಿ ಉಪಕರಣಗಳು ಮತ್ತು ಹೊಲಿಗೆ ಯಂತ್ರ ದುರಸ್ತಿ ತರಬೇತಿ (8 ದಿನಗಳು), ಹೋಮ್ ಕೇರ್ ಮತ್ತು ಹೋಮ್ ನರ್ಸಿಂಗ್ ತರಬೇತಿ (15 ದಿನಗಳು), ಹೊಮ್ ಮ್ಯಾನೇಜ್ ಮೆಂಟ್ , ಕೌಟುಂಬಿಕ ಕಾನೂನು ಸಾಕ್ಷರತೆ ಸ್ಕ್ರೀನ್ ಕೇರ್ (ಮೊಬೈಲ್ ವ್ಯಸನ), ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ (6 ದಿನಗಳು).
ಅಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿಯ ಹಾಳೆಯಲ್ಲಿ ಬರೆದು ದಿನಾಂಕ 31.10.2024 ರ ಒಳಗೆ ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’ ಮಣಿಪಾಲ-ಅಂಬಾಗಿಲು ರಸ್ತೆ ಪೆರಂಪಳ್ಳಿ, ಮಣಿಪಾಲ-576102 ಇಲ್ಲಿಗೆ ಕಳುಹಿಸಿ ಕೊಡುವುದು ಅಥವಾ ದೂರವಾಣಿ ಸಂಖ್ಯೆ: 0820 – 2570263 ಸಂಪರ್ಕಿಸುವ ಮೂಲಕ ದೃಢೀಕರಿಸಬಹುದು. ಮೊದಲು ನೊಂದಾಯಿಸಿದವರಿಗೆ ಪ್ರಾಶಸ್ತ್ಯ ನೀಡಲಾಗುವುದು. ಆಯಾ ತರಬೇತಿಯ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.