Friday, October 18, 2024
Friday, October 18, 2024

ಇತರರ ಭಾವದಲ್ಲಿ

ಇತರರ ಭಾವದಲ್ಲಿ

Date:

ವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10% ಕಡಿಮೆ ಬಂದಿತ್ತು. ಮೊದಲಿಗೆ ಬೇಜಾರಾದರೂ ನಂತರ ಸವಿ ಸಮಾಧಾನದಿಂದ ಇದ್ದಳು. ಆದರೆ ಅವಳ ತಾಯಿಗೆ ವಿಪರೀತ ದುಃಖ ಆಗಿ ಮಗಳಿಗೂ ತುಂಬಾ ಬೇಜಾರಾಗಿರಬೇಕು ಆ ಬೇಜಾರಲ್ಲಿ ಏನಾದರೂ ಮಾಡಿಕೊಂಡರೆ ಎಂಬ ಆತಂಕ ಶುರುವಾಯಿತು. ಮಗಳಿಗೆ ಸಮಾಧಾನ ಮಾಡಲು ಹೊರಟಳು.

ಇನ್ನೊಂದೆಡೆ ಸಂಕೇತನಿಗೆ ಡ್ಯಾನ್ಸ್ ರಿಯಾಲಿಟಿ ಶೋ ಅಲ್ಲಿ ಅವಾರ್ಡ್ ಸಿಗದ ಕಾರಣ ತನ್ನ ತಾಯಿಯ ಕನಸು ನುಚ್ಚು ನೂರಾಗಿರಬೇಕೆಂದು ಎಣಿಸಿ ಬೇಜಾರು ಪಟ್ಟನು. ಅಮ್ಮನ ಮುಖ ನೋಡಲು ಹಿಂಜರಿಯುತ್ತಿದ್ದ. ತಾನು ಅಮ್ಮನ ಖುಷಿಯನ್ನು ಕಿತ್ತಿರುವ ಅನುಭವವಾಗಿತ್ತು. ತಾನು ಒಳ್ಳೆಯ ಮಗನಲ್ಲವೆಂದು ಬೇಸರಪಟ್ಟನು. ಇಲ್ಲಿ ಎರಡು ಘಟನೆಗಳನ್ನು ನೋಡಿದಾಗ ಆ ಘಟನೆಗೆ ಸಂಬಂಧಪಟ್ಟ ಇನ್ನೊಬ್ಬರ ಆಲೋಚನೆಗಳನ್ನು ತಾನೇ ಊಹಿಸಿ ನಿರ್ಧರಿಸುತ್ತಿದ್ದರು. ಇಲ್ಲಿ ಇನ್ನೊಬ್ಬರ ಆಲೋಚನೆಯನ್ನು ಹಾಗೂ ತಮ್ಮ ಆಲೋಚನೆಗಳನ್ನು ಒಟ್ಟಿಗೆ ಕಲ್ಪಿಸುತ್ತಿದ್ದರು. ಸವಿಗೆ ಅಷ್ಟೇನು ದುಃಖವಾಗಿರಲಿಲ್ಲ ಆದರೆ ಅವಳ ತಾಯಿ ಸವಿಗೆ ದುಃಖವಾಗಿದೆ ಎಂದು ತಾನೇ ಊಹಿಸಿದ್ದಳು. ಇನ್ನೊಂದೆಡೆ ಸಂಕೇತನ ತಾಯಿಗೆ ಬೇಜಾರಾಗಿರಲಿಲ್ಲ ಮುಂದೆ ಎಷ್ಟೋ ಅವಕಾಶಗಳಿವೆ ಎಂದು ಅರಿತಿದ್ದಳು. ಆದರೆ ಸಂಕೇತನಿಗೆ ತನ್ನ ತಾಯಿಯ ಆಲೋಚನೆಯನ್ನು ತಾನೇ ಸೃಷ್ಟಿಸಿದ್ದನು.ಇಲ್ಲಿ ವಾಸ್ತವ ಬೇರೆ ಅವರಿಬ್ಬರು ತಿಳಿದುಕೊಂಡದ್ದು ಬೇರೆಯೇ.

ಈ ರೀತಿಯ ಆಲೋಚನೆಗಳನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತೇವೆ. ನಾವೇ ಮೂಡಿಸಿದ ಇನ್ನೊಬ್ಬರ ಆಲೋಚನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒದ್ದಾಡುತ್ತಿರುತ್ತೇವೆ. ಇದು ಎಂದೂ ಮುಗಿಯದ ಪಯಣವಾಗಿ ಬಿಡುತ್ತದೆ. ಏಕೆಂದರೆ ನಾವು ಏನು ಬೇಕಾದರೂ ಆಲೋಚಿಸಬಹುದು ಅಲ್ಲವೇ? ಅವರು ಬೇಜಾರಾಗಿದ್ದಾರೆ, ತುಂಬಾ ಸಂಕಟಪಡುತ್ತಿದ್ದಾರೆ, ಹೇಗೆ ಸರಿಪಡಿಸುವುದು, ತನ್ನಿಂದ ಸಾಧ್ಯವಾಗ್ತಾ ಇಲ್ಲ ಏನು ಮಾಡೋದೆಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಇದನ್ನು ಸರಿಪಡಿಸುವುದಾದರೂ ಹೇಗೆ?

ಮೊದಲಿಗೆ ಇನ್ನೊಬ್ಬರ ಆಲೋಚನೆಯನ್ನು ಊಹಿಸುವುದನ್ನು ಬಿಡಬೇಕು. ಹೇಗೆ ಎಂದರೆ ಉದಾಹರಣೆಗೆ ಸವಿಗೆ ನಿಜವಾಗಲೂ ಬೇಜಾರು ಆಗಿದೆ ಅಥವಾ ತಾನೇ ಅಂದರೆ ಸವಿಯ ತಾಯಿಯೇ ಊಹಿಸಿದ್ದಾಳೆ ಎಂದು ತನಗೆ ತಾನೆ ಪ್ರಶ್ನೆಯನ್ನು ಕೇಳಬೇಕು. ಅದನ್ನು ಊಹಿಸುವ ಬದಲು ಮಗಳಿಗೆ ನೇರ ಪ್ರಶ್ನೆ ಕೇಳುವುದು ಉಚಿತ. ಆಗ ನಿಜಾಂಶ ತಿಳಿಯುತ್ತದೆ. ತನ್ನ ಕಲ್ಪನೆಯ ಸಾಗರದಲ್ಲಿ ಮುಳುಗುವ ಅವಕಾಶವಿರುವುದಿಲ್ಲ. ಹೀಗೆ ನಮ್ಮ ಆಲೋಚನೆಗಳನ್ನು ಕಮ್ಮಿ ಮಾಡಿದರೆ ಇತರರು ಹೀಗೆ ಆಲೋಚಿಸುತ್ತಾರೆ, ದುಃಖದಲ್ಲಿದ್ದಾರೆ, ಕೋಪದಲ್ಲಿದ್ದಾರೆ ಎಂದು ತನ್ನಷ್ಟಕ್ಕೆ ಊಹಿಸಿ ತಮ್ಮ ಭಾವನೆಗಳನ್ನು ಇಮ್ಮಡಿಸುದು ನಿಲ್ಲುತ್ತದೆ. ಇನ್ನೊಂದು ಉಪಾಯವೆಂದರೆ ನಮ್ಮ ಆಲೋಚನೆಗಳನ್ನು ಬರೆದಿಟ್ಟುಕೊಳ್ಳುವುದು. ನಾವು ಹೇಗೆ ಆಲೋಚನೆ ಮಾಡುತ್ತೇವೆ, ಯಾಕೆ ಆಲೋಚನೆ ಮಾಡುತ್ತೇವೆ ಎಂದು ತಿಳಿಯುತ್ತದೆ.

ಮತ್ತೊಂದು ಉಪಾಯ ಧ್ಯಾನ ಮಾಡುವುದು. ಇದರಿಂದ ನಮ್ಮ ಆಲೋಚನೆಗಳಿಗೆ ಹಿಡಿತವಿರುತ್ತದೆ. ನಮ್ಮ ಮನಸ್ಸನ್ನು ನಾವು ಅರಿಯಬಹುದು. ಯಾವುದು ನಿಜ ಯಾವುದನ್ನು ನಾವು ಕಲ್ಪಿಸುತ್ತೇವೆ ಎಂಬುದರ ಅರಿವಾಗುತ್ತದೆ. ನಮ್ಮ ಮನಸ್ಸು ಹೇಗೆಂದರೆ ನಮ್ಮ ಭಾವನೆಗಳನ್ನು ತಿಳಿದುಕೊಳ್ಳುವುದಲ್ಲದೆ ಇತರರ ಭಾವನೆಗಳನ್ನು ಕಲ್ಪಿಸುತ್ತದೆ. ಇದು ವಿಪರೀತ ಚಿಂತೆಗೆ ಕಾರಣವಾಗುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಸಂಬಂಧಗಳು ಕೆಡಬಹುದು. ಆ ಕಲ್ಪನೆಗಳು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅದು ನಿಜವೆಂದು ನಂಬುತ್ತಾರೆ. ಬೇರೆಯವರು ಹೀಗೆ ಅನುಭವಿಸಿದ್ದಾರೆ ಎಂದು ನಂಬಿರುತ್ತಾರೆ. ಅದು ಅವರ ಕಲ್ಪನೆ ಎಂದು ತಿಳಿಯಲು ಸಮಯ ಹಿಡಿಯುತ್ತದೆ. ಕೆಲವರಿಗೆ ಜೀವನವಿಡಿ ಗೊತ್ತೇ ಆಗುವುದಿಲ್ಲ. ಅದನ್ನು ಆದಷ್ಟು ಬೇಗ ಅರಿಯುವುದು ಮುಖ್ಯ.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜನ್ಮದಿನ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಸಂಪನ್ನ; ೧೩೦ ಯೂನಿಟ್ ರಕ್ತ ಸಂಗ್ರಹ

ಕುಂದಾಪುರ, ಅ.18: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜನ್ಮದಿನದ ಪ್ರಯುಕ್ತ ಅಭಯಹಸ್ತ...
error: Content is protected !!