ಉಡುಪಿ, ಅ.15: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ನಡೆದ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಪ್ರಭಾ ಯಕ್ಷ ವಿಶ್ವ ಬಳಗ ಶಿವಪುರ ಇಲ್ಲಿನ ವಿದ್ಯಾರ್ಥಿಗಳಿಂದ ಕೊಂಕಣಿ ಯಕ್ಷಗಾನ – ಶ್ರೀ ಕೃಷ್ಣ ಪುಷ್ಪ ವಿಲಾಸ ಜರಗಿತು. ಯಕ್ಷ ನಿರ್ದೇಶಕ ಮತ್ತು ಭಾಗವತಿಕೆಯಲ್ಲಿ ರತ್ನಾಕರ ಶೆಣೈ ಶಿವಪುರ, ಮದ್ದಲೆಯಲ್ಲಿ ಆನಂದ್ ಭಟ್ ಮತ್ತು ಪ್ರದೀಪ್ ಭಟ್, ಚೆಂಡೆಯಲ್ಲಿ ಗಣೇಶ್ ಶೆಣೈ ಮಾಸ್ಟರ್ ಸಂದೇಶ್ ಸಹಕರಿಸಿದರು.
ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಯಕ್ಷ ಗುರುಗಳಾಗಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವುದರ ಜೊತೆಗೆ 100ಕ್ಕೂ ಹೆಚ್ಚು ಕಡೆಗಳಲ್ಲಿ ಕನ್ನಡ, ಕೊಂಕಣಿ, ತುಳು ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನಮೆಚ್ಚುಗೆ ಪಡೆದು ಉಡುಪಿ ಜಿಲ್ಲೆಯ ವಿವಿಧ ಆಶ್ರಮಗಳಲ್ಲಿ ಉಚಿತ ಪ್ರದರ್ಶನ ನೀಡಿದ ರತ್ನಾಕರ ಶೆಣೈ ಶಿವಪು ಅವರನ್ನು ದೇವಳದ ವತಿಯಿಂದ ಸಮ್ಮಾನಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.