Friday, October 11, 2024
Friday, October 11, 2024

ಐರಾವತ 2.0 ರಸ್ತೆಗಿಳಿಯಲು ಸಿದ್ಧತೆ

ಐರಾವತ 2.0 ರಸ್ತೆಗಿಳಿಯಲು ಸಿದ್ಧತೆ

Date:

ಬೆಂಗಳೂರು, ಅ.10: ಐರಾವತ 2.0 ಮಾದರಿಯ 20 ಬಸ್‌ಗಳು ಅಕ್ಟೋಬರ್‌ ಕೊನೆಯೊಳಗೆ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಳ್ಳಲಿದೆ. ಬಸ್‌ ಹಿಂಭಾಗದಲ್ಲಿ ಫಾಗ್‌ ಲೈಟ್‌ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ. ಚಾಲಕರಿಗೆ ಸುಲಭವಾಗಿ ಕೈಗೆಟಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದೆ. ಬಾಗಿಲಿನ ಮೂಲಕ ಪಾದಚಾರಿಗಳನ್ನು ಸುಲಭವಾಗಿ ಚಾಲಕರು ಗಮನಿಸುವ ವ್ಯವಸ್ಥೆ ಇದೆ. ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗಳಿದ್ದು, 30 ನಾಜಲ್‌ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡ ನಿಯಂತ್ರಿಸುವ ವ್ಯವಸ್ಥೆ ಇದಾಗಿದೆ.

ಶೇ. 3.5ರಷ್ಟು ಅಧಿಕ ಉದ್ದ ಇರುವ ಬಸ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಿಸಲಾಗಿದೆ. ವಿಶಾಲ ಲಗೇಜು ಸ್ಥಳಾವಕಾಶ, ಅತ್ಯಾಧುನಿಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಇದೆ. ಶಕ್ತಿಶಾಲಿ ಹ್ಯಾಲೊಜೆನ್‌ ಹೆಡ್‌ಲೈಟ್‌ ಮತ್ತು ಹಗಲು ಚಾಲನಾ ಲೈಟ್‌ಗಳೊಂದಿಗೆ ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್‌ ವಿನ್ಯಾಸವನ್ನು ಈ ಬಸ್‌ ಹೊಂದಿದೆ. ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್‌ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್‌, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಂಕ್ಷನ್‌ಗಳಲ್ಲಿ ಎಐ ಸಿಗ್ನಲ್

ಬೆಂಗಳೂರು, ಅ.10: 2025ರ ಜನವರಿ ವೇಳೆಗೆ ಬೆಂಗಳೂರಿನ 165 ಜಂಕ್ಷನ್‌ಗಳಿಗೆ ಎಐ...

ಕರಾವಳಿ ನಿಯಂತ್ರಣ ವಲಯದ ನಿರಪೇಕ್ಷಣಾ ಪತ್ರ ಕೋರಿ ಅರ್ಜಿ ಸಲ್ಲಿಸುವ ಕುರಿತು

ಉಡುಪಿ, ಅ.10: ಕರಾವಳಿ ನಿಯಂತ್ರಣ ವಲಯದ ನಿರಪೇಕ್ಷಣಾ ಪತ್ರ ಕೋರಿ ಬರುವ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ: ತುಂತುರು ನೀರಾವರಿ ಘಟಕಗಳಿಗೆ ಅರ್ಜಿ ಆಹ್ವಾನ

ಉಡುಪಿ, ಅ.10: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...
error: Content is protected !!