Saturday, November 23, 2024
Saturday, November 23, 2024

ಪ್ರಾಚ್ಯ-ತೌಳವ ಕರ್ಣಾಟ

ಪ್ರಾಚ್ಯ-ತೌಳವ ಕರ್ಣಾಟ

Date:

ಉಡುಪಿ, ಸೆ.30: ಕರ್ನಾಟಕವು ಅಗಾಧವಾದ ಐತಿಹಾಸಿಕ ಕುರುಹುಗಳನ್ನು ಒಳಗೊಂಡಿದ್ದು, ಅದರ ಮಹತ್ವವನ್ನು ಪ್ರಪಂಚಕ್ಕೆ ಪರಿಚಯಿಸುವ ದೃಷ್ಟಿಯಿಂದ ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ ಮತ್ತು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಹಾಗೂ ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇವುಗಳ ಜಂಟಿ ಸಹಯೋಗದೊಂದಿಗೆ “ಪ್ರಾಚ್ಯ-ತೌಳವ ಕರ್ಣಾಟ” ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವನ್ನು ನಡೆಸಲು ಮುಂದಾಗಿದೆ. ಈ ಮೂಲಕ ಕರುನಾಡಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಾಚೀನ ವಿಷಯಗಳ ಸಂಶೋಧನೆ, ಸಂರಕ್ಷಣೆ, ಪ್ರಚಾರದ ಜೊತೆಗೆ ವೈಜ್ಞಾನಿಕ ದಾಖಲೀಕರಣವನ್ನು ಮಾಡುವುದರ ಮೂಲಕ ಐತಿಹಾಸಿಕ ಪ್ರಜ್ಞೆಯನ್ನು ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತದೆ.

ಈ ಐತಿಹಾಸಿಕ ಆಕರಗಳು ಶತ-ಶತಮಾನಗಳ ಪ್ರಾಕೃತಿಕ ಮತ್ತು ಮಾನವನ ಹೊಡೆತವನ್ನು ಎದುರಿಸಿ ಬಲಿಷ್ಠವಾಗಿ ನಿಂತವುಗಳಾಗಿವೆ. ಅಂಥವುಗಳಲ್ಲಿ ಕೆಲವು ಪ್ರಸಿದ್ಧತೆಯನ್ನು ಪಡೆದು ಪ್ರಕಟಿತವಾಗಿವೆ; ಆದರೆ ಇನ್ನೂ ಕೆಲವು ಅಜ್ಞಾತವಾಗಿರುವುದರ ಜೊತೆಗೆ ವಿನಾಶದಂಚಿನಲ್ಲಿದೆ.

ಪ್ರಾಚ್ಯ-ತೌಳವ ಕರ್ಣಾಟ ಕಾರ್ಯಕ್ರಮದಡಿಯಲ್ಲಿ ಪ್ರಾಚೀನ ದೇಗುಲ, ಸ್ಮಾರಕ, ಕೋಟೆ-ಕೊತ್ತಲ, ಪುಷ್ಕರಣಿ, ಬಸದಿ, ಶಾಸನ, ಶಿಲ್ಪ, ನಾಣ್ಯ, ಹಸ್ತಪ್ರತಿ, ತಾಳೆಗರಿ, ಕಾವಿ-ಭಿತ್ತಿಚಿತ್ರಗಳು ಇನ್ನೂ ಮುಂತಾದ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪುರಾತನ ಆಕರಗಳನ್ನು ಶುಚಿಗೊಳಿಸಿ-ಸಂರಕ್ಷಣೆ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಇಂತವುಗಳ ಐತಿಹಾಸಿಕ ಮಹತ್ವವನ್ನು ಪರಿಚಯಿಸಿ-ಉಳಿಸುವ ಉದ್ದೇಶವನ್ನು ಹೊಂದಿದೆ. ಈ ಅಭಿಯಾನವು ನಿರಂತರವಾದ ನಿಸ್ವಾರ್ಥ ಸೇವೆಯಾಗಿದ್ದು, ಇತಿಹಾಸವನ್ನು ಉಳಿಸುವ ಈ ಪ್ರಯತ್ನಕ್ಕೆ ಸ್ಥಳೀಯ ಇತಿಹಾಸ ಆಸಕ್ತರ, ಉತ್ಸಾಹಿ ವಿದ್ಯಾರ್ಥಿಗಳ, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.

ತಮ್ಮ ಪ್ರದೇಶಗಳಲ್ಲಿ ಕಂಡುಬರುವ ಉಪೇಕ್ಷಿತ ಚಾರಿತ್ರಿಕ ಸ್ಥಳಗಳನ್ನು ಗುರುತಿಸಿ ಈ-ಮೇಲ್ / ವ್ಯಾಟ್ಸಪ್ ಮೂಲಕ ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದರೆ, ಪ್ರಾರಂಭಿಕವಾಗಿ ಆಗಬೇಕಾಗಿರುವ ಶುಚಿತ್ವ, ವಿಸ್ತೃತ ಮಾಹಿತಿ ಸಂಗ್ರಹಣೆ ಇತ್ಯಾದಿಗಳನ್ನು ಕ್ರೋಢೀಕರಣ ಮಾಡಿ ಇತಿಹಾಸ ದಾಖಲೀಕರಣವನ್ನು ಮಾಡಲಾಗುವುದು.

Email Id: [email protected]
Mobile No: +91 82966 13761
WhatsApp Link: https://chat.whatsapp.com/ICoY4NrxQMkBs6hnvMnfZQ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...
error: Content is protected !!