ಉಡುಪಿ, ಆ.4: 2023-24 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು / ತತ್ಸಮಾನ ವೃಂದದ ಶಿಕ್ಷಕರು ಕೋರಿಕೆ/ ಪರಸ್ಪರ ಜಿಲ್ಲೆಯ ಹೊರಗೆ-ವಿಭಾಗದ ಒಳಗಿನ ವರ್ಗಾವಣೆ ಕೌನ್ಸಿಲಿಂಗ್ ಅನ್ನು ಶಿಕ್ಷಣ ಇಲಾಖೆಯ ಆಯುಕ್ತರ ಸುತ್ತೋಲೆಯಂತೆ ನಡೆಸಬೇಕಾಗಿದ್ದು, ಅಂತರ್ ಜಿಲ್ಲಾ ಪರಸ್ಪರ ಹಾಗೂ ಕೋರಿಕೆ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಶಿಕ್ಷಕರುಗಳು ನಿಗಧಿಪಡಿಸಿದ ವೇಳಾಪಟ್ಟಿಯಂತೆ, ಸೂಕ್ತ ದಾಖಲಾತಿಗಳಾದ ಅರ್ಜಿಯ ಪ್ರತಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ದೃಢೀಕರಣ ಮತ್ತು ಆದ್ಯತೆ ಕೋರಿದ್ದಲ್ಲಿ ಆದ್ಯತೆಗೆ ಸಂಬಂಧಿಸಿದ ಮೂಲ ಪ್ರಮಾಣ ಪತ್ರದೊಂದಿಗೆ ಉಪನಿರ್ದೇಶಕರ ಕಚೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಕೊಠಡಿ ಸಂಖ್ಯೆ:301, ಸಿ ಬ್ಲಾಕ್, ರಜತಾದ್ರಿ, ಮಣಿಪಾಲ, ಉಡುಪಿ ಇಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಪ್ರಾಥಮಿಕ ಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ ಆದ್ಯತಾ ಕ್ರಮ ಸಂಖ್ಯೆ 146 ರಿಂದ 345 ರ ವರೆಗಿನ ಸಹ ಶಿಕ್ಷಕರುಗಳು ಕೋರಿಕೆ ವರ್ಗಾವಣೆ ಬಯಸಿದ್ದಲ್ಲಿ ಆಗಸ್ಟ್ 03 ರಂದು ಹಾಗೂ ಆದ್ಯತಾ ಕ್ರಮ ಸಂಖ್ಯೆ 01 ರಿಂದ 03 ರವರೆಗಿನ ಸಹ ಶಿಕ್ಷಕರುಗಳು ಪರಸ್ಪರ ವರ್ಗಾವಣೆ ಬಯಸಿದ್ದಲ್ಲಿ ಆ.12 ರಂದು ಮೇಲ್ಕಂಡ ಸ್ಥಳದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ ಕೋರಿಕೆ ವರ್ಗಾವಣೆ ಬಯಸುವ ಆದ್ಯತಾ ಕ್ರಮ ಸಂಖ್ಯೆ 01 ರಿಂದ 08 ವರೆಗಿನ ವಿಶೇಷ ಶಿಕ್ಷಕರುಗಳು, ಆದ್ಯತಾ ಕ್ರಮ ಸಂಖ್ಯೆ 01 ರಿಂದ 43 ರ ವರೆಗಿನ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಆದ್ಯತಾ ಕ್ರ.ಸಂ. 01 ರಿಂದ 100 ರ ವರೆಗಿನ ಸಹ ಶಿಕ್ಷಕರುಗಳಿಗೆ ಆ. 6 ರಂದು, ಆದ್ಯತಾ ಕ್ರ.ಸಂ. 101 ರಿಂದ 280 ರ ವರೆಗಿನ ಸಹ ಶಿಕ್ಷಕರುಗಳಿಗೆ ಆ. 7 ರಂದು ಹಾಗೂ ಆದ್ಯತಾ ಕ್ರ.ಸಂ. 281 ರಿಂದ 443 ರ ವರೆಗಿನ ಸಹ ಶಿಕ್ಷಕರುಗಳಿಗೆ ಆ. 8 ರಂದು ಮತ್ತು ಪರಸ್ಪರ ವರ್ಗಾವಣೆ ಬಯಸುವ ಆದ್ಯತಾ ಕ್ರ.ಸಂ.01 ರಿಂದ 07 ರ ವರೆಗಿನ ಸಹ ಶಿಕ್ಷಕರುಗಳಿಗೆ ಆ. 12 ರಂದು ಕೌನ್ಸಿಲಿಂಗ್ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.