ನವದೆಹಲಿ, ಜು.10: 2023-24ರಲ್ಲಿ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು 1.55 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ (ಕೆವಿಐಸಿ) ಮನೋಜ್ ಕುಮಾರ್, 2013-14ರಲ್ಲಿ ಖಾದಿ ಉತ್ಪನ್ನಗಳ ಮಾರಾಟ ಸುಮಾರು 31 ಸಾವಿರ ಕೋಟಿ ರೂ. ತಲುಪಿ, ಪ್ರಸ್ತುತ ಕೆವಿಐಸಿ ಉತ್ಪಾದನೆ, ಮಾರಾಟ ಮತ್ತು ಹೊಸ ಉದ್ಯೋಗ ಸೃಷ್ಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದರು.
ಖಾದಿ ಯುವಜನತೆಗೆ ಹೊಸ ಫ್ಯಾಶನ್ ಸಂಕೇತವಾಗಿದೆ ಎಂದು ಕುಮಾರ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಬ್ರಾಂಡ್ ಶಕ್ತಿ ಖಾದಿ ಉತ್ಪನ್ನಗಳ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮನೋಜ್ ಕುಮಾರ್ ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು ಕೆವಿಐಸಿಯ ಮುಖ್ಯ ಉದ್ದೇಶವಾಗಿದೆ. 2013-14ರಲ್ಲಿ ಕ್ಯುಮುಲೇಟಿವ್ ಉದ್ಯೋಗವು ಒಂದು ಕೋಟಿ 30 ಲಕ್ಷವಾಗಿದ್ದು, 2023-24ರಲ್ಲಿ ಇದು ಒಂದು ಕೋಟಿ 87 ಲಕ್ಷಕ್ಕೆ ತಲುಪಿದೆ ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದರು.