ಬಾರಕೂರು, ಜೂ.14: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಇಲ್ಲಿನ ಐಕ್ಯೂಏಸಿ ಹಾಗೂ ಎನ್ ಎಸ್ ಎಸ್ ಸಹಭಾಗಿತ್ವದಲ್ಲಿ ವಾಣಿಜ್ಯಶಾಸ್ತ್ರ ವಿಭಾಗವು ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ರಮೇಶ್ ಆಚಾರ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಹೆಗ್ಗುಂಜೆಯ ಉದ್ಯಮಿ ಗುರುಪ್ರಸಾದ್ ಅವರು ಕಾರ್ಪೊರೇಟ್ ಜಗತ್ತಿಗೆ ಸಿದ್ದರಾಗುವ ಕುರಿತು ಮಾತನಾಡುತ್ತಾ ಉದ್ಯಮವನ್ನು ನಡೆಸಬೇಕಾದರೆ ಗುರಿ, ಪರಿಶ್ರಮದ ಜೊತೆಗೆ ಅಪಾರವಾದ ತಾಳ್ಮೆ ಬೇಕು, ಕೌಶಲ್ಯ ಬೇಕು ಹಾಗೂ ನಮ್ಮ ದೇಹ, ಬುದ್ಧಿ, ಮನಸ್ಸು ಒಗ್ಗೂಡಿ ಕಾರ್ಯ ನಿರ್ವಹಿಸಬೇಕು. ಯಶಸ್ಸನ್ನು ಕಾಣಬೇಕಾದರೆ ಯಾವುದೇ ಒಳದಾರಿಗಳನ್ನು ಹಿಡಿಯಬಾರದು ಎಂಬುದನ್ನು ತನ್ನ ಅನುಭವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಐಕ್ಯೂಏಸಿ ಸಂಚಾಲಕರಾದ ವಿದ್ಯಾ ಪಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶೋಭಾ ಆರ್., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರುತಿ ಆಚಾರ್ಯ, ರಾಧಾಕೃಷ್ಣ, ನಂದಿನಿ ಸಿ.ಕೆ., ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುದಿನ್ ಟಿಎ. ಉಪಸ್ಥಿತರಿದ್ದರು. ಸುದಿನ ಟಿ ಎ ಇವರು ಯಶಸ್ಸು ಜೀವನದಲ್ಲಿ ಒಂದು ಶೇಕಡ ಪ್ರೇರಣೆಯಿಂದ ದೊರೆತರೆ 99 ಶೇಕಡ ಪರಿಶ್ರಮದಿಂದ ದೊರೆಯುತ್ತದೆ ಎಂದರು. ವಿಶ್ವವಿದ್ಯಾಲಯ ಮಟ್ಟದ ಬೆಸ್ಟ್ ಟ್ಯಾಲೆಂಟ್ ಅವಾರ್ಡ್- 2024 ಅನ್ನು ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ನಿತೀಶ್ ಜಿ ಅಂಚನ್ ಅವರು ಪಡೆದರು. ಬಾರ್ಕೂರು ಪ್ರಥಮ ದರ್ಜೆ ಕಾಲೇಜಿನ ಆದರ್ಶ್ ರನ್ನರ್ಸ್ ಅಪ್ ಪ್ರಶಸ್ತಿ ಗಳಿಸಿದರು. ವಿಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ಡಾ. ಜಿ ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ವಿಜೇತರಾದರು. ಸುಜನ್ ತೃತೀಯ ಬಿ ಎ ಪ್ರಾರ್ಥಿಸಿದರು. ಉಪನ್ಯಾಸಕಿ ಶೋಭಾ ಆರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ರಾಧಾಕೃಷ್ಣ ವಂದಿಸಿದರು. ತೃತೀಯ ಬಿಕಾಂ ನ ನಂದಿಲಾ ಕಾರ್ಯಕ್ರಮ ನಿರೂಪಿಸಿದರು.