ಮಂಗಳೂರು: ಹರಿಪಾದಗೈದ ಪೇಜಾವರ ಶ್ರೀಗಳ ಸಂಸ್ಮರಣಾರ್ಥ ಶ್ರೀಗಳ ಹುಟ್ಟೂರಾದ ರಾಮಕುಂಜದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ‍್ಯರಲ್ಲಿ ನಿರ್ಮಿತವಾದ ಚಂದ್ರಮಂಡಲ ರಥವು ಕೋಟೇಶ್ವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದಾಗ ನೂತನ ಚಂದ್ರಮಂಡಲ ರಥವನ್ನು ಮಂಗಳೂರಿನ ಕೆಪಿಟಿ ಬಳಿ ರಾ. ಹೆದ್ದಾರಿಯ ಪಾರ್ಶ್ವದಲ್ಲಿ ಮಂಗಳೂರಿನ ನಾಗರಿಕರ ಪರವಾಗಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ, ಪುಷ್ಪಾರ್ಚನೆಗೈದು ಸ್ವಾಗತಿಸಲಾಯಿತು.
ಶರವು ರಾಘವೇಂದ್ರ ಶಾಸ್ತ್ರಿ, ಕರ್ಣಾಟಕ ಬ್ಯಾಂಕ್‌ನ
ಎಂ.ಡಿ. ಮಹಾಬಲೇಶ್ವರ ಎಂ.ಎಸ್., ಪಿ.ಆರ್.ಒ. ಶ್ರೀನಿವಾಸ ದೇಶಪಾಂಡೆ, ಕಾರ್ಪೊರೇಟರ್ ಶಕಿಲಾ ಕಾವ, ಕೂಟ ಮಹಾಜಗತ್ತು ಮಂಗಳೂರು ಅಧ್ಯಕ್ಷ ಎ. ಚಂದ್ರಶೇಖರ ಮಯ್ಯ, ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಮಯ್ಯ, ನಿತ್ಯಾನಂದ ಕಾರಂತ ಪೊಳಲಿ, ತಾರಾನಾಥ ಹೊಳ್ಳ, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ರಾಮಕೃಷ್ಣ ರಾವ್, ನಂದಳಿಕೆ ಬಾಲಚಂದ್ರ ರಾವ್, ಅ. ಭಾ. ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿವೇಕ್ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.