ಉಡುಪಿ: ಮಹಿಳೆಯರ ಮತಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ವಿಧವಾ ಮಾಸಾಶನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅವಿವಾಹಿತ ಮಹಿಳೆಯರಿಗೆ, ವಿಚ್ಚೇದಿತ ಮಹಿಳೆಯರಿಗೆ ಸಹಾಯಧನ ಹೆಚ್ಚಳ ಗೊಳಿಸಲಾಗಿದೆ.
ಸಮುದಾಯದ ಓಲೈಕೆಗಾಗಿ ಎಲ್ಲಾ ನಿಗಮಗಳಿಗೆ ಅನುದಾನ
ಭರಪೂರ ಬಿಡುಗಡೆಗೊಳಿಸಲಾಗಿದೆ.ಮೇಕೆದಾಟು ಪಾದಯಾತ್ರೆಯ ಪರಿಣಾಮದಿಂದಾಗಿ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಯೊಂದಿಗೆ ಭದ್ರ ಮೇಲ್ದಂಡೆ ಯೋಜನೆ, ಕಳಸಬಂಡೂರಿ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಗಳಿಗೂ ಅನುದಾನ ಬಿಡುಗಡೆಯಾಗಿದೆ.
ಕೊರತೆ ಬಜೆಟ್‌ನ ಮಂಡನೆಯೊಂದಿಗೆ ಅನುದಾನಗಳ ಬಿಡುಗಡೆಯು ಕಷ್ಟ ಸಾಧ್ಯವಾಗಲಿದೆ. ಉದ್ಯೋಗ ಹಾಗೂ ಅಭಿವೃದ್ಧಿ
ಯೋಜನೆಗಳನ್ನು ರೂಪಿಸದೆ ಅನುದಾನ ಬಿಡುಗಡೆಗೆ
ಸೀಮಿತವಾದ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.