ಬಂಟ್ವಾಳ: ಯುವಕ ಮಂಡಲ (ರಿ.) ಇರಾ ಇದರ 48 ನೇ ವಾರ್ಷಿಕೋತ್ಸವ ಯುವಕ ಮಂಡಲದ ವಠಾರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯುವಕ ಮಂಡಲ(ರಿ.) ಇರಾ ಅಧ್ಯಕ್ಷರಾದ ಪ್ರಸೀನ್ ಶೆಟ್ಟಿ ಆಚೆಬೈಲು ಮಾತನಾಡಿ, ಇರಾ ಯುವಕ ಮಂಡಲದ ಮುಂಬರುವ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಅರಸು ಕೊಡೆಯ ಚಾಕರಿಯವರಾದ ಜನಾರ್ಧನ ಸಪಲ್ಯ ಗಾಣದ ಕೊಟ್ಯ ಕೆಂಜಿಲ ಅವರನ್ನು ಸನ್ಮಾನಿಸಲಾಯಿತು.
ದ.ಕ.ಜಿ.ಪ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿಯರಾದ ಸುಜಾತ ಟಿ.ಎಸ್ ಹಾಗೂ ಸೌಮ್ಯ ಯೋಗೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಗ್ನೇಸ್ ಡಿ’ಸೋಜ, ತಾಲೂಕ್ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ್ ಆರ್ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಪದ್ಮಶ್ರೀ ಸೋಲಾರ್ ಸಿಸ್ಟಮ್ ಪುತ್ತೂರು ಇದರ ಮಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಯುವ ಉದ್ಯಮಿ ವಿಜೇಶ್ ನಾಯಕ್ ನಾರ್ಯ ನಡಿಗುತ್ತು, ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು ಅಧ್ಯಕ್ಷರಾದ ರವಿ ರೈ ಪಜೀರು, ಯುವಕ ಮಂಡಲದ ಸ್ಥಾಪಕ ಸದಸ್ಯರುಗಳಾದ ವಾಮನ ಪೂಜಾರಿ ತಾಳಿತ್ತಬೆಟ್ಟು, ಜಾರಪ್ಪ ಕುಲಾಲ್ ಸೂತ್ರಬೈಲು ಉಪಸ್ಥಿತರಿದ್ದರು.
ನಿಖಿಲ್ ಕೊಟ್ಟಾರಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಪುಷ್ಪರಾಜ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು. ನಿತೇಶ್ ಶೆಟ್ಟಿ ಸ್ವಾಗತಿಸಿ, ಅಶ್ವಿತ್ ಕೊಟ್ಟಾರಿ ವಂದಿಸಿದರು. ಯತಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಕ ಮಂಡಲದ ಸದಸ್ಯರಿಂದ ಯಕ್ಷಗಾನ ನಾಟ್ಯ ವೈವಿದ್ಯ ನಡೆಯಿತು. ಲಕುಮಿ ತಂಡದ ಪ್ರಸಿದ್ಧ ನಾಟಕ ’ಎನ್ನ ಬಂಗ ಎಂಕೆ ಗೊತ್ತು’ ಪ್ರದರ್ಶನಗೊಂಡಿತು.