ಉಡುಪಿ: ಕೃಷಿ ಕಾಯ್ದೆ ತಿದ್ದುಪಡಿ ಮಸೂದೆಯ ಮೂಲಕ ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನುಮೂಳೆ ಮುರಿಯುವ ಕೇಂದ್ರದ ದಮನಕಾರಿ ನಿಲುವು ಅಸಾಂವಿಧಾನಿಕವಾಗಿದ್ದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ. ಇದರ ವಿರುದ್ಧ ನಡೆಯುವ ರೈತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ.
ಸೆಪ್ಟೆಂಬರ್ 27ರಂದು ರೈತ ಸಂಘಟನೆಗಳು ಕರೆಕೊಟ್ಟ ಭಾರತ ಬಂದ್ ಮುಷ್ಕರ ಕಾರ್ಯಕ್ರಮವನ್ನು ಒಂದು ರಾಷ್ಟ್ರೀಯ ಆಂದೋಲನವನ್ನಾಗಿಸಿ ಯಶಸ್ವಿಗೊಳಿಸಿ ಕೇಂದ್ರ ಸರಕಾರವನ್ನು ಎಚ್ಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಆ ನಿಟ್ಟಿನಲ್ಲಿ ಸೋಮವಾರದ ಭಾರತ್ ಬಂದ್ ಕಾರ್ಯಕ್ರಮದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ರೈತಪರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.