Home ಸುದ್ಧಿಗಳು ರಾಜ್ಯ ದೇರೆಬೈಲು: ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಭೂಮಿಪೂಜೆ

ದೇರೆಬೈಲು: ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಭೂಮಿಪೂಜೆ

135
0

ಮಂಗಳೂರು, ಮಾ. 16: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26 ನೇ ದೇರೆಬೈಲು ನೈರುತ್ಯ ವಾರ್ಡಿನಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ನಿರ್ಮಾಣದ ಕುರಿತು ಈ ಹಿಂದೆ ಸಮುದಾಯದ ಮುಖಂಡರಿಗೆ ನೀಡಿದ ಭರವಸೆಯಂತೆ 75 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಸಹಕಾರದೊಂದಿಗೆ ಸರಕಾರದ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಮುದಾಯ ಭವನವು ಸಮಾಜದ ಬಂಧುಗಳ ಉಪಯೋಗಕ್ಕಾಗಿ ಕಾರ್ಯನಿರ್ವಹಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.

ಪಾಲಿಕೆ ಉಪಮೇಯರ್ ಪೂರ್ಣಿಮಾ, ಸ್ಥಳೀಯ ಕಾರ್ಪೋರೇಟರ್ ಗಣೇಶ್ ಕುಲಾಲ್, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಜಯಪ್ಪ, ಉಪಾಧ್ಯಕ್ಷ ಚನ್ನಬಸಪ್ಪ ರೊಟ್ಟಿ, ಪ್ರಧಾನ ಕಾರ್ಯದರ್ಶಿ ವಿವೇಕ್ ಶೆಟ್ಟರ್, ಜೊತೆ ಕಾರ್ಯದರ್ಶಿ ಸುನಂದಾ, ಎಚ್ ಎಸ್ ಗುರುಮೂರ್ತಿ, ಪ್ರದೀಪ್ ಜೆ.ಬಿ., ರುದ್ರಪ್ಪ, ರೂಪಾ ಮಲ್ಲಿಕಾರ್ಜುನ, ತೋಟೇಗೌಡ್ರು, ಮಂಗಳ, ಕವಿತಾ ಮುರುಗೇಶ್, ರಾಜೇಂದ್ರಪ್ಪ, ವೀರಣ್ಣ, ಧರ್ಮರಾಜ್, ಸುಷ್ಮಾ, ಲತಾ ಪ್ರಸನ್ನ, ಶಿವಪ್ಪ, ಶಿವಪ್ರಕಾಶ್, ಬಸವರಾಜ್, ಜೀವನ್, ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.