Home ಸುದ್ಧಿಗಳು ಪ್ರಾದೇಶಿಕ ಉಡುಪಿ: ಆಗಸ್ಟ್ 19 ರಂದು ಲಸಿಕೆ ಲಭ್ಯತೆ ವಿವರ

ಉಡುಪಿ: ಆಗಸ್ಟ್ 19 ರಂದು ಲಸಿಕೆ ಲಭ್ಯತೆ ವಿವರ

652
0

ಉಡುಪಿ: ದಿನಾಂಕ 19/08/2021 ರಂದು ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ.

ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ) ಸಮಯ: ಅಪರಾಹ್ನ 1.00 ರಿಂದ 3.00 ರವರೆಗೆ- ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್- (150 ಡೋಸ್ ಲಭ್ಯ)

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ) ಸಮಯ: ಅಪರಾಹ್ನ 1.00 ರಿಂದ 3.00 ರವರೆಗೆ- ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ – (200 ಡೋಸ್ ಲಭ್ಯ)

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯ ಹಳೆ ಕಟ್ಟಡ (ಅಲಂಕಾರ್ ಥಿಯೇಟರ್ ಹತ್ತಿರ) ಸಮಯ:ಬೆಳಿಗ್ಗೆ 9.30 ರಿಂದ- ಕೋವಿಶೀಲ್ಡ್ 2ನೇ ಡೋಸ್ – (150 ಡೋಸ್ ಲಭ್ಯ)

ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ ಸಮಯ:ಬೆಳಿಗ್ಗೆ 10.00 ರಿಂದ ಅಪರಾಹ್ನ 1.00 ರವರೆಗೆ- ದಿನಾಂಕ 10/09/2021 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್
ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (100 ಡೋಸ್ ಲಭ್ಯ.)

ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕೆ ಲಭ್ಯವಿದ್ದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 84 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಥಮ ಆದ್ಯತೆಯ ಮೇಲೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.