Home ಸುದ್ಧಿಗಳು ಪ್ರಾದೇಶಿಕ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ದೂರದೃಷ್ಟಿ ಯೋಜನೆ ತಯಾರಿ ತರಬೇತಿ

ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ದೂರದೃಷ್ಟಿ ಯೋಜನೆ ತಯಾರಿ ತರಬೇತಿ

275
0

ಹೆಬ್ರಿ, ಮೇ 17: ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ದೂರದೃಷ್ಟಿ ಯೋಜನೆ ಅತ್ಯಂತ ಮುಖ್ಯ. ಆದರೆ ಈ ಯೋಜನೆ ತಯಾರಿಯಲ್ಲಿ ಮಹಿಳೆಯರ ಸಹಭಾಗಿತ್ವ ಇಲ್ಲದಿದ್ದರೆ ಆ ಯೋಜನೆ ಫಲಶೃತಿಯಾಗಲು ಅಸಾಧ್ಯ. ಈ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆ ತಯಾರಿಯಲ್ಲಿ ಯಾವ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕೆಂದು ಮಾಹಿತಿ ನೀಡುವುದು ಅತ್ಯವಶ್ಯಕ ಎಂದು ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನವೀನ್ ಕುಮಾರ್ ಹೆಚ್ ಡಿ ಹೇಳಿದರು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್, ಹೆಬ್ರಿ, ಗ್ರಾಮ ಪಂಚಾಯತ್ ವರಂಗ, ತ್ರಿವೇಣಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ವರಂಗ ಇವರ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ 4 ದಿನಗಳ ಮಾದರಿ ಒಕ್ಕೂಟಗಳ ದೂರದೃಷ್ಟಿ ಕುರಿತು ತರಬೇತುದಾರರಾಗಿ ಪ್ರಾತ್ಯಕ್ಷಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಪಂಚಾಯತ್ ಹೆಬ್ರಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ., ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಹಾಗೂ ತ್ರಿವೇಣಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವರಂಗ ಅಧ್ಯಕ್ಷರಾದ ಪ್ರಮೀಳಾ ಹರೀಶ್, ಸಂಜೀವಿನಿ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವರಾಮ್, ವಲಯ ಮೇಲ್ವಿಚಾರಕಿ ಸುಖೇತಾ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಉಡುಪಿ ಎನ್.ಆರ್.ಎಲ್.ಎಂ ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶೋಭಾ ಭಂಡಾರಿ ಪ್ರಾರ್ಥನೆಗೈದರು, ಎನ್.ಆರ್.ಎಲ್.ಎಂ ಯುವ ವೃತ್ತಿಪರರಾದ ಜಯಮಾಲಾ ವಂದಿಸಿದರು. ಸುಜಾತ, ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.