Home ಸುದ್ಧಿಗಳು ಪ್ರಾದೇಶಿಕ ಸಾಯ್ಬ್ರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರೋಬೋಸಾಫ್ಟ್ ಟೆಕ್ನಾಲಜೀಸ್ ವತಿಯಿಂದ ಕಂಪ್ಯೂಟರ್ ಕೊಡುಗೆ

ಸಾಯ್ಬ್ರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ರೋಬೋಸಾಫ್ಟ್ ಟೆಕ್ನಾಲಜೀಸ್ ವತಿಯಿಂದ ಕಂಪ್ಯೂಟರ್ ಕೊಡುಗೆ

249
0

ಬ್ರಹ್ಮಾವರ, ಮಾ. 26: ಸಾಯ್ಬ್ರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ಉಡುಪಿ ಸಂತೆಕಟ್ಟೆಯ ರೋಬೋಸಾಫ್ಟ್ ಟೆಕ್ನಾಲಜೀಸ್ ಇದರ ವತಿಯಿಂದ ರೂ 1.5 ಲಕ್ಷ ಮೌಲ್ಯದ 3 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಲಾಯಿತು. ರೋಬೋಸಾಫ್ಟ್ ನ ಕಾರ್ಯದರ್ಶಿ ಚಕ್ರೀ ಹೆಗ್ಡೆ ಮಾತನಾಡುತ್ತಾ, ಕಾರ್ಪೊರೇಟ್ ವಲಯದ ಸಂಸ್ಥೆ ನಮ್ಮದಾಗಿದ್ದು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಭೂತ ಅಗತ್ಯತೆಗಳಲ್ಲಿ ಒಂದಾದ ಕಂಪ್ಯೂಟರ್ ಗಳನ್ನು ಕೊಡುವ ಮೂಲಕ ಸಮಾಜೋಪಯೋಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಮ್ಮದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಲ್ತಾರು ನಿರಂಜನ ಹೆಗ್ಡೆ ರೋಬೋಸಾಫ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಚಕ್ರಿ ಹೆಗ್ಡೆ ಇವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ರೋಬೋಸಾಫ್ಟ್ ನ ಆಡಳಿತಾಧಿಕಾರಿ ಪ್ರಸಾದ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲ್, ಸದಸ್ಯರಾದ ಅಶೋಕ ಪ್ರಭು ಸಾಯ್ಬ್ರಕಟ್ಟೆ ಹಾಗೂ ರಾಮಪ್ರಕಾಶ್, ಸಂಸ್ಥೆಯ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ, ಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.