Home ಸುದ್ಧಿಗಳು ಪ್ರಾದೇಶಿಕ ಮತದಾನ ಜಾಗೃತಿ: ಕಿರುಚಿತ್ರ ನಿರ್ಮಾಣ ಸ್ಪರ್ಧೆ ವಿಜೇತರ ವಿವರ

ಮತದಾನ ಜಾಗೃತಿ: ಕಿರುಚಿತ್ರ ನಿರ್ಮಾಣ ಸ್ಪರ್ಧೆ ವಿಜೇತರ ವಿವರ

228
0

ಉಡುಪಿ, ಮಾ. 18: ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಪಡೆದ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ. ಸಾಧನಾ ಕಟಪಾಡಿ ಅವರ ನನ್ನ ಮತ ನನ್ನ ಹೆಮ್ಮೆ ಕಿರು ಚಿತ್ರವು ಪ್ರಥಮ ಸ್ಥಾನ ಪಡೆದಿದ್ದು, 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಆದಿತ್ಯ ಅಂಬಲಪಾಡಿ ಅವರ ಓಟು=02 ಕಿರುಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು, 7,500 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಕೆ. ಸತ್ಯೇಂದ್ರ ಪೈ ಅವರ ಮತದಾರ ಕಿರುಚಿತ್ರವು ತೃತೀಯ ಸ್ಥಾನ ಪಡೆದಿದ್ದು, 5,000 ರೂ ನಗದು ಹಾಗೂ ಪ್ರಶಸ್ತಿ ಪತ್ರ, ಸುಚಿತ್ರ ಎಸ್ ಅವರ ಮತ ಸಂಭ್ರಮ ಕಿರು ಚಿತ್ರಕ್ಕೆ ನಾಲ್ಕನೇ ಸ್ಥಾನ ಲಭಿಸಿದ್ದು, 2,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಸತೀಶ್ ಕಲ್ಯಾಣಪುರ ಅವರ ನಮ್ಮ ಓಟು ನಮ್ಮ ಪವರ್ ಕಿರು ಚಿತ್ರವು ಐದನೇ ಸ್ಥಾನ ಪಡೆದಿದ್ದು, 1,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.