Home ಸುದ್ಧಿಗಳು ಪ್ರಾದೇಶಿಕ ನಯಂಪಳ್ಳಿ ಶ್ರೀ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಅನಂತವೃತ ಆಚರಣೆ

ನಯಂಪಳ್ಳಿ ಶ್ರೀ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಅನಂತವೃತ ಆಚರಣೆ

634
0

ಉಡುಪಿ: ಶ್ರೀ ಕಾಶೀಮಠ ಸಂಸ್ಥಾನ ವಾರಣಾಸಿ ಇದರ ಶಾಖಾ ಮಠ ಉಡುಪಿ ನಯಂಪಳ್ಳಿ ಶ್ರೀ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನಂತ ಚತುರ್ದಶಿಯ ಪ್ರಯುಕ್ತ ಇಂದು ಶ್ರೀ ದೇವತಾ ಪ್ರಾರ್ಥನೆ, ಗಂಗಾ ಯಮುನಾ ಪೂಜಾಪೂರ್ವಕ ಕಲಶ ಪ್ರತಿಷ್ಠಾಪನೆ, ಮಹಾಮಂಗಳಾರತಿ ಸಹಿತ ವಿಶೇಷ ಅಲಂಕಾರ ಪೂಜೆಯು ಪ್ರಧಾನ ಅರ್ಚಕ ಶ್ರೀಜಿತ್ ಶರ್ಮಾ, ಪ್ರಧಾನ ಪುರೋಹಿತ ಮಹೇಶ್ ಭಟ್ ನೇತೃತ್ವದಲ್ಲಿ ನಡೆಯಿತು.

ನಯಂಪಳ್ಳಿ ಶ್ರೀ ಕಾಶೀಮಠ ಸಮಿತಿ ಅಧ್ಯಕ್ಷರಾದ ಶಿರಿಯಾರ ಗಣೇಶ್ ನಾಯಕ್, ಕಾರ್ಯದರ್ಶಿ ಎಂ. ಅರವಿಂದ ಭಟ್, ಕೋಶಾಧಿಕಾರಿ ರಘುವೀರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.