ಉಡುಪಿ, ನ.30: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ (2025-26 ರಿಂದ 2029-30 ರವರೆಗೆ), ಕಾಪು ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು ಡಿಸೆಂಬರ್ 15 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ನಿಗಧಿಪಡಿಸಲಾಗಿದೆ. ಸದರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಉಮೇದುದಾರರಿಗೆ ನವೆಂಬರ್ 30 ರಿಂದ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ನಾಮಪತ್ರ ವಿತರಿಸಲಾಗುವುದು. ಆಕಾಂಕ್ಷಿಗಳು ಚುನಾವಣಾಧಿಕಾರಿಗಳಿಗೆ ಅರ್ಜಿ ಮೂಲಕ 250 ರೂ. ಗಳನ್ನು ಠೇವಣಿಯಾಗಿ ಪಾವತಿಸಿದ ಮೂಲ ರಶೀದಿ ಹಾಗೂ ಸಂಬAಧಿಸಿದ ತಹಶೀಲ್ದಾರರಿಂದ ದೃಢೀಕೃತ ಪಹಣಿ ಪ್ರತಿಯೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 6 ರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ಕೊನೆಯ ದಿನವಾಗಿದೆ ಎಂದು ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹಾಗೂ ಕಾಪು ತಾಲೂಕು ಕೃಷಿಕ ಸಮಾಜದ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಪು ತಾಲೂಕು ಕೃಷಿಕ ಸಮಾಜ ಚುನಾವಣೆ
ಕಾಪು ತಾಲೂಕು ಕೃಷಿಕ ಸಮಾಜ ಚುನಾವಣೆ
Date: