ಬಾರ್ಕೂರು, ಡಿ.15: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಂಗ್ಲಿಷ್ ವಿಭಾಗದ ವತಿಯಿಂದ ‘ಸಂವಹನ ಕೌಶಲ್ಯಗಳು’ ಕಾರ್ಯಗಾರ ನಡೆಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇಲ್ಲಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಿನ್ ಲಾಯಲ್ ಮೆಂಡೋನ್ಸಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂವಹನ ಕೌಶಲವನ್ನು ವೃದ್ಧಿಸಿಕೊಳ್ಳಲು ಅಗತ್ಯವಾದ ಮಾರ್ಗೋಪಾಯಗಳ ಕುರಿತು ಮಾಹಿತಿ ನೀಡಿದರು. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಭಾಷಾ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಸಾಧ್ಯ ಎಂದು ಪ್ರಾತ್ಯಕ್ಷಿಕೆ ಮತ್ತು ವೀಡಿಯೋಗಳ ಮೂಲಕ ಪ್ರಸ್ತುತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಹಾಗೂ ಐಕ್ಯೂಏಸಿ ಸಂಚಾಲಕರಾದ ವಿದ್ಯಾ ಪಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ನಿರಂಜನ ಶರ್ಮಾ ಸ್ವಾಗತಿಸಿದರು.
ಬಾರ್ಕೂರು: ‘ಸಂವಹನ ಕೌಶಲ್ಯಗಳು’ ಕಾರ್ಯಗಾರ
ಬಾರ್ಕೂರು: ‘ಸಂವಹನ ಕೌಶಲ್ಯಗಳು’ ಕಾರ್ಯಗಾರ
Date: