ಸೂರ್ಯನನ್ನ ಕಾಣದೇ ಕೆಲ ದಿನಗಳಾಗಿತ್ತು. ಇಂದು ಮಟಮಟ ಮಧ್ಯಾಹ್ನ ಸೂರ್ಯನ ದರ್ಶನವಾಯ್ತು. ಮಳೆ ಇಲ್ಲದ ಬಿಳಿ ಬಿಳಿ ಮೋಡಗಳ ನೀಲಾಕಾಶದಲ್ಲಿ ಸುಮಾರು 12:30 ರ ಹೊತ್ತಿಗೆ ಸೂರ್ಯನ ಸುತ್ತ ಸುಂದರ ವರ್ತಲ. ಆ ವರ್ತುಲದಲ್ಲಿ ಕಾಮನಬಿಲ್ಲಿನಲ್ಲಿರುವಂತೆ ಎಲ್ಲ ಬಣ್ಣಗಳು. ಯಾರೋ ಹಳ್ಳಿಯ ಹಿರಿಯ ರೈತರೆಂದರು “ಮಳೆ ಇನ್ನು ಕಡಿಮೆಯಾಗುತ್ತೆ , ಸೂರ್ಯನಿಗೆ ಕೊಡೆ ಹಿಡಿದಿದೆ “ ಅಂತ.
ಹೌದು ಇದೊಂದು ಪಕೃತಿಯ ಅಪರೂಪದ ಸುಂದರ ಬೆಳಕಿನ ವಿದ್ಯಾಮಾನ. ಮಳೆ ಸ್ವಲ್ಪ ಕಡಿಯಾಗುವಾಗ ಹೀಗಿನ ವಿದ್ಯಾಮಾನ ನಡೆಯುತ್ತರುತ್ತವೆ. ಹೀಗಿನ ವಿಶೇಷ ಸಮಯದಲ್ಲಿ ನಮ್ಮ ವಾತಾವರಣದ ಸುಮಾರು 6 ಅಥವಾ 7ಕಿಮೀ ಎತ್ತರದಲ್ಲಿ ಕೆಲ ನಿಮಿಷಗಳ ಕಾಲ ಮಂಜುಗಡ್ಡೆಯ ಹರಳುಗಳು (ice crystals) ಸೃಷ್ಟಿಯಾಗುತ್ತವೆ. ಅವುಗಳ ಮೂಲಕ ಹಾದು ನಮ್ಮೆಡೆಗೆ ಬರುವ ಸೂರ್ಯನ ಕಿರಣ ಡಿಪ್ರ್ಯಾಕ್ಷನ್ ಆಗಿ ಈ ರೀತಿಯ ವರ್ತುಲವನ್ನು ಏರ್ಪಡಿಸುತ್ತವೆ. ಇದನ್ನು ಡಿಫ್ರ್ಯಾಕ್ಷನ್ ಹಾಲೋ (Diffraction Halo) ಎನ್ನುವರು.
ನೋಡಲು ಬಲು ಚೆಂದ. ಈ ಸಮಯದಲ್ಲಿ ಹುಣ್ಣಿಮೆಯ ಚಂದ್ರನ ಸುತ್ತಲೂ ಈ ರೀತಿಯ ವರ್ತುಲ ಕಾಣುವುದುಂಟು ಚಂದ್ರ ಸುಮಾರು ನೆತ್ತಿಗೆ ಬರುವಾಗ ಇದು ಗೋಚರಿಸುತ್ತದೆ.
-ಡಾ. ಎ. ಪಿ. ಭಟ್ ಉಡುಪಿ.