Saturday, November 23, 2024
Saturday, November 23, 2024

ತ್ರಿಶಾ ವಿದ್ಯಾ ಪಿಯು ಕಾಲೇಜು: ಸೇತುಬಂಧ ಕಾರ್ಯಾಗಾರ

ತ್ರಿಶಾ ವಿದ್ಯಾ ಪಿಯು ಕಾಲೇಜು: ಸೇತುಬಂಧ ಕಾರ್ಯಾಗಾರ

Date:

ಕಟಪಾಡಿ, ಜೂನ್ 29: ಕಟಪಾಡಿಯ ತ್ರಿಶಾ ವಿದ್ಯಾ ಪಿ.ಯು ಕಾಲೇಜಿನಲ್ಲಿ ಸೇತುಬಂಧ ಕಾರ್ಯಾಗಾರ ನಡೆಯಿತು. ಮೊದಲನೆಯ ದಿನ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಇವರು ವಿದ್ಯಾರ್ಥಿಗಳಿಗೆ ಸಂಸ್ಕ್ರತಿ ಹಾಗೂ ಕಾಲೇಜು ನಿಯಮದ ಬಗ್ಗೆ ತಿಳಿಸಿದರು. ತ್ರಿಶಾ ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿರುವ ಜಯದೀಪ್ ಇವರು ಸಂವಹನಗಳ ಬಗ್ಗೆ ಚಟಿವಟಿಕೆಗಳನ್ನು ನಡೆಸಿಕೊಟ್ಟರು. ಎರಡನೆಯ ದಿನ ‘ಇಂಪಾಸಿಬಲ್ ಟು ಪಾಸಿಬಲ್’ – ಅಸಾಧ್ಯದಿಂದ ಸಾಧ್ಯದೆಡೆಗೆ ಎನ್ನುವ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಜೈಕಿಶನ್ ಭಟ್ ನೆರವೇರಿಸಿದರು. ಮೂರನೆಯ ದಿನ ಪಠ್ಯಕ್ರಮದ ವಿಷಯಗಳ ಬಗ್ಗೆ ಸೇತು-ಬಂಧ ಕಾರ್ಯಾಗಾರ ನಡೆಯಿತು. ವಾಣಿಜ್ಯ ವಿಷಯದ ಕುರಿತು ಜಯದೀಪ್, ಮೂಲಗಣಿತವನ್ನು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಹಣ ಮತ್ತು ಹೂಡಿಕೆಯ ಕುರಿತಾಗಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ರಾವ್ ತಿಳಿಸಿಕೊಟ್ಟರು. ನಂತರ ತ್ರಿಶಾ ಕಾಲೇಜಿನ ಕನ್ನಡ ಪ್ರಾಧ್ಯಪಕ ಧೀರಜ್ ಬೆಳ್ಳಾರೆ ಜೀವನ ಮೌಲ್ಯಗಳನ್ನು ಚಟುವಟಿಕೆ ನೆರವೇರಿಸಿದರು.

ನಾಲ್ಕನೆಯ ದಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ, ರಾಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಕಯಂತ್ರದ ತರಬೇತಿ ನೀಡಲಾಯಿತು. ನಂತರ ರಾಷ್ಟ್ರಮಟ್ಟದ ಜೆ.ಸಿ.ಐ ತರಬೇತುದಾರರಾದ ರಾಜೇಂದ್ರ ಭಟ್.ಕೆ ಇವರು ‘Different levels of Success’ ಎನ್ನುವ ವಿಷಯದ ಮೇಲೆ ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಐದನೆಯ ದಿನ ಸಿ.ಎ ಗಿರಿಧರ್ ಕಾಮತ್ ಇವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಹಲವಾರು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಸ್ಫೂರ್ತಿ ತುಂಬಿ ಸೇತುಬಂಧ ಕಾರ್ಯಾಗಾರವನ್ನು ಸಂಪನ್ನಗೊಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...
error: Content is protected !!