ಉಡುಪಿ, ಏ. 15: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಏಪ್ರಿಲ್ 18 ಮತ್ತು 19 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ವಿದ್ಯುತ್ ಕಂಬಗಳನ್ನು ಬದಿಗೆ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಉಡುಪಿ-2, ಉಡುಪಿ-1 ಫೀಡರಿನ ಮತ್ತು 110/33/11 ಕೆ.ವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಅಂಬಲಪಾಡಿ ಫೀಡರ್ ಮಾರ್ಗದಲ್ಲಿ ಉಡುಪಿ ನಗರ ಪ್ರದೇಶಗಳಾದ ಮಿಷನ್ ಕಂಪೌಂಡ್, ಕೋರ್ಟ್ ಬ್ಯಾಕ್ ರೋಡ್, ಕೋರ್ಟ್ ರಸ್ತೆ, ಕಿನ್ನಿಮುಲ್ಕಿ, ಕೊಳಂಬೆ, ಉಡುಪ ಕಂಪೌಂಡ್, ಬೈಲೂರು ಮಹಿಷಮರ್ಧಿನಿ ದೇವಸ್ಥಾನ ಬಳಿ, ದುರ್ಗಾನಗರ, ಬೀಡಿನಗುಡ್ಡೆ, ಚಿಟ್ಪಾಡಿ, ಶೋಭಾ ಬೇಕರಿ, ಒಳಕಾಡು, ಸಿಟಿ ಬಸ್ ಸ್ಟ್ಯಾಂಡ್ ಏರಿಯಾ, ಮಸೀದಿ ಸುತ್ತಮುತ್ತ, ಕಡಿಯಾಳಿ, ಎಂ.ಜಿ.ಎಂ ಎದುರು, ಸಿಟಿ ಸೆಂಟರ್ ಮಾಲ್, ಕನ್ನರ್ಪಾಡಿ, ಕಿನ್ನಿಮುಲ್ಕಿ, ಅಜ್ಜರಕಾಡು, ಎನ್.ಜಿ.ಯೋ ಕಾಲೋನಿ, ಫೈರ್ ಸ್ಟೇಷನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಪ್ರಿಲ್ 18 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಇಂಡಸ್ಟ್ರೀಯಲ್, ಭಂಡಾರಿ ಪವರ್ ಲೈನ್, ಇಂದ್ರಾಳಿ, ರೋಯಲ್ ಎಂಬೆಸಿ, ಉದ್ಯಾವರ-2 ಮತ್ತು ಮೂಡುಬೆಳ್ಳೆ ಫೀಡರಿನಲ್ಲಿ ಹಾಗೂ 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಚಿಟ್ಪಾಡಿ ಫೀಡರಿನಲ್ಲಿ ಮತ್ತು 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಿಂದ ಹೊರಡುವ 11 ಕೆ.ವಿ ಪೆರ್ಡೂರು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ರೋಯಲ್ ಎಂಬೆಸಿ, ಕೊರಂಗ್ರಪಾಡಿ, ಮಾರ್ಪಳ್ಳಿ, ಉದ್ಯಾವರ, ಕಟಪಾಡಿ, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಇಂದಿರಾನಗರ, ಕಸ್ತೂರ್ಬಾನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್, ಪುತ್ತಿಗೆ ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/33/11 ಕೆ.ವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110/11ಕೆ.ವಿ 10 ಎಂ.ವಿ.ಎ ಶಕ್ತಿ ಪರಿವರ್ತಕದ ಹಾಗೂ 11 ಕೆ.ವಿ ಬ್ರೇಕರ್‌ಗಳ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸದರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಹಿರಿಯಡಕ, ಹಿರೇಬೆಟ್ಟು, ಮಾಣೈ, ಪೆರ್ಡೂರು ಮತ್ತು ಬಜೆ ಫೀಡರ್ ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ, ಹರಿಖಂಡಿಗೆ, ವಡ್ಜ, ಸಾಣೆಕಲ್ಲು, ಮಾಣೈ, ನವಗ್ರಾಮ, ಪಂಚನಬೆಟ್ಟು, ಮೂಂಡುಜೆ, ಹಿರಿಯಡ್ಕ ಪೇಟೆ, ಪಾಪುಜೆ, ಬಜೆ ಗುಡ್ಡೆಯಂಗಡಿ, ಕೊಂಡಾಡಿ, ಕೊಡಿಬೆಟ್ಟು, ಪೆರ್ಣಂಕಿಲ, ಕಣಂಜಾರು, ಕಾಜರಗುತ್ತು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 18 ರಂದು ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಬ್ರಹ್ಮಾವರ, ಮಾಬುಕಳ, ಉಪ್ಪೂರು, ಚೇರ್ಕಾಡಿ ಫೀಡರ್ ಮಾರ್ಗದಲ್ಲಿ ಹಾಗೂ 110/11ಕೆ.ವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಬಾರ್ಕೂರು ಎಕ್ಸ್ಪ್ರೆಸ್ ಫೀಡರ್ ಮಾರ್ಗದಲ್ಲಿ ಮತ್ತು 220/110/11ಕೆ.ವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ 11ಕೆ.ವಿ ಹೆಗ್ಗುಂಜೆ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ಚಾಂತಾರು, ವಾರಂಬಳ್ಳಿ, ಕುಮ್ರಗೋಡು, ಉಪ್ಪಿನಕೋಟೆ, ಬಾಳ್ತಾರು, ಸೂಲ್ಕುದ್ರು, ಕೋಟೆ ರೋಡ್, ನಿಡಂಬಳ್ಳಿ, ಕಲ್ಯಾಣಪುರ, ಹೇರೂರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ದೇವುಬೈಲು, ರಾಜೀವನಗರ, ಹೆರಂಜೆ, ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಕಾಡೂರು, ಮೊಗವೀರಪೇಟೆ, ಕೊಕ್ಕರ್ಣೆ, ಕೆಂಜೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 18 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಮಾರ್ಗದಲ್ಲಿ ಉಳಿಯಾರಗೋಳಿ ಗ್ರಾಮ, ಬಂಟಕಲ್ಲು ಗ್ರಾಮ, ಮೂಡಬೆಟ್ಟು ಗ್ರಾಮ, ಪಾಂಗಳ ಗ್ರಾಮ, ಶಿರ್ವ ಹಾಗೂ ಶಂಕರಪುರ ಗ್ರಾಮ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು ಗ್ರಾಮ, ಇನ್ನಂಜೆ ಗ್ರಾಮ, ಪಡುಬೆಳ್ಳೆ ಗ್ರಾಮ, ಮಟ್ಟಾರು ಗ್ರಾಮ, ಪದವು, ಪಾಂಬೂರು, ಪಿಲಾರು ಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು ಗ್ರಾಮ, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ ಗ್ರಾಮ, ಪಣಿಯೂರು ಗ್ರಾಮ, ಕಾಪು ಬಡಾ ಗ್ರಾಮ(ಉಚ್ಚಿಲ), ಮೂಳೂರು ಗ್ರಾಮ, ಬೆಳಪು ಗ್ರಾಮ, ಅಬ್ಬೇಟ್ಟು, ಪಾದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಶಿವಪುರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮುದ್ರಾಡಿ, ಮುನಿಯಾಲು, ಬಚ್ಚಪ್ಪು, ಶಿವಪುರ, ಕೆರೆಬೆಟ್ಟು, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
33/11 ಕೆ.ವಿ ತಲ್ಲೂರು ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 33/11 ಕೆ.ವಿ ತಲ್ಲೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕೆ.ಎಂ.ಎಫ್, ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈಶ್ವರನಗರ, ಸರಳೆಬೆಟ್ಟು, ಅರ್ಬಿ, ಪ್ರಗತಿನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏ. 19 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.