ಕೋಟ, ಮಾ. 20: ಕ್ರೀಡೆ ಬದುಕಿನ ಮನೋಲ್ಲಾಸದ ಒಂದು ಭಾಗವಾಗಿದ್ದು, ಒತ್ತಾಡದ ಜಂಜಾಟದ ಈ ಜೀವನದಲ್ಲಿ ನೆಮ್ಮದಿ ನೀಡಬಲ್ಲ ಭಾಗವಾಗಿದ್ದು, ಆಟಗಾರರು ಸ್ನೇಹ ಸೌಹಾರ್ದತೆಯಿಂದ ಪಂದ್ಯಾಟದಲ್ಲಿ ಭಾಗವಹಿಸಬೇಕು ಎಂದು ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಹೇಳಿದರು. ಅವರು ಶ್ರೀವಿನಾಯಕ ಯುವಕ ಮಂಡಲ(ರಿ)ಸಾಯ್ಬ್ರಕಟ್ಟೆ- ಯಡ್ತಾಡಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಯ್ಬ್ರಕಟ್ಟೆ ಮೈದಾನದಲ್ಲಿ ನಡೆದ ಶ್ರೀಕೃಷ್ಣ ಟ್ರೋಫಿ-2023(ನೆನಪಿನ ಕನವರಿಕೆ) ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಯಮಿ ವೈ ಸಂಕಯ್ಯ ಶೆಟ್ಟಿ ಮಾತನಾಡಿ, ಶ್ರೀ ವಿನಾಯಕ ಯುವಕ ಮಂಡಲವು ಸಾಮಾಜಿಕ ಕಾರ್ಯಕ್ರಮದ ಜೊತೆಗೆ ಇಂತಹ ಕ್ರೀಡಾಕೂಟ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಭಾ ಕಾರ್ಯಕ್ರಮದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಯುವಕ ಮಂಡಲದ ಅಧ್ಯಕ್ಷ ನಂದೀಶ್ ನಾಯ್ಕ, ಉಪಾಧ್ಯಕ್ಷ ಅಮೃತ್ ಪೂಜಾರಿ, ಕಾರ್ಯದರ್ಶಿ ರಾಜೇಶ್ ನಾಯ್ಕ ಉಪಸ್ಥಿತರಿದ್ದರು.
ಏಕದಂತ ಬಿ ತಂಡ ಚಾಪಿಂಯನ್ ಆಗಿ ಶ್ರೀಕೃಷ್ಣ ಟ್ರೋಫಿ- ೨೦೨೩ನ್ನು ಮುಡಿಗೇರಿಸಿಕೊಂಡು, ಪೋರ್ ಫ್ಲಸ್ ಪೋರ್ ಮಧುವನ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿತು. ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕಾರ್ತಿಕ್ ಬೀಜಾಡಿ ಪಡೆದುಕೊಂಡರು.