ಬೆಳ್ಮಣ್: ತಾಯಿಯ ಹಾಲನ್ನು ಕುಡಿದು ಬೆಳೆವ ನಾವು ಸಾಯುವ ತನಕ ಗೋವಿನ ಹಾಲನ್ನು ಕುಡಿಯುತ್ತೇವೆ. ಕೇವಲ ಲಾಭ ನಷ್ಟದ ಲೆಕ್ಕಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲರೂ ಗೋವನ್ನು ಪೂಜಿಸಬೇಕಾಗಿದೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ ಹೇಳಿದರು.
ಅವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಿದ ಗೋಪೂಜೆ ಸಂಭ್ರಮ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿದರು.
ಗೋವುಗಳು ಮುನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸಿದ ಗೋಮಾತೆಗೆ ನಾವು ಶರಣಾಗಿ ಬದುಕಬೇಕಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.
ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ಪೂಜಾರಿ, ನಿಕಟಪೂರ್ವಾಧ್ಯಕ್ಷ ಬೋಳ ಉದಯ ಅಂಚನ್, ಪೂವಾಧ್ಯಕ್ಷರಾದ ರಘುವೀರ್ ಶೆಟ್ಟಿ, ಸುರೇಶ್ ಕಾಸ್ರಬೈಲು, ಅಬ್ಬನಡ್ಕ ಸತೀಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಉಪಾಧ್ಯಕ್ಷ ಲೀಲಾ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಕಾರ್ಯದರ್ಶಿ ಪುಷ್ಪ ಕುಲಾಲ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಕೀರ್ತನ್ ಕುಮಾರ್, ಸದಸ್ಯರಾದ ಹರೀಶ್ ಪೂಜಾರಿ, ಸುರೇಶ್ ಅಬ್ಬನಡ್ಕ, ಕಿರಣ್ ಶೆಟ್ಟಿ, ಮಂಜುನಾಥ ಆಚಾರ್ಯ, ಅಶ್ವಿನಿ ಪೂಜಾರಿ ಮೊದಲಾದವರಿದ್ದರು.