ಬ್ರಹ್ಮಾವರ: ಗೋಸಂರಕ್ಷಣಾ ಜಾಗೃತಿ ವೇದಿಕೆ ಬಾರ್ಕೂರು ಇವರ ವತಿಯಿಂದ 11ನೇ ವರ್ಷದ ಗೋಪೂಜಾ ಕಾರ್ಯಕ್ರಮ ಇಂದು ಬಾರ್ಕೂರು ಕೋಟೆಕೇರಿ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಅರ್ಚಕರಾದ ವೆಂಕಟರಮಣ ಭಟ್ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಶಾಂತರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗಂಡು ಕರುವನ್ನು ನಿರ್ಲಕ್ಷಿಸುವ ಘಟನೆಗಳು ನಡೆಯುತ್ತಿದೆ. ಗಂಡು ಕರುವನ್ನು ನಿರ್ಲಕ್ಷ ಮಾಡದೇ ಎಲ್ಲರೂ ಪೋಷಿಸುವಂತೆ ಆಗಬೇಕು. ಸಾಧ್ಯವಾಗದಿದ್ದಲ್ಲಿ ಸಮೀಪದ ಗೋಶಾಲೆಗೆ ನೀಡಬೇಕು ಎಂದರು. ಆಡಳಿತ ಮೊಕ್ತೇಸರರಾದ ಮಂಜುನಾಥ ರಾವ್, ಗೋ ಸಂರಕ್ಷಣಾ ಜಾಗೃತಿ ವೇದಿಕೆಯ ಮುಖ್ಯಸ್ಥರಾದ ಶ್ರೀಧರ ಆಚಾರ್ಯ ಸಂತೆಗುಡ್ಡೆ ಬಾರ್ಕೂರು, ಬಿ ಸುಧಾಕರ ಬಾರ್ಕೂರು, ಶ್ರೀಕಾಂತ್ ಆಚಾರ್ ಬಾರ್ಕೂರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಬಿ.ಸುಧಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಆಚಾರ್ಯ ವಂದಿಸಿದರು. ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಕಾಶಿಯ ಪವಿತ್ರ ಗಂಗಾ ತೀರ್ಥವನ್ನು ವಿತರಿಸಲಾಯಿತು.