ದಾವಣಗೆರೆ: ಪಡಿ ಸಂಸ್ಥೆ ಮಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚೆನ್ನಗಿರಿ ತಾಲೂಕು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಿಗನೂರು ಇವರ ಸಂಯುಕ್ತ ಆಶ್ರಯದಲ್ಲಿ ಚನ್ನಗಿರಿ ತಾಲೂಕಿನ ಕತ್ತಲಗೆರೆ ಕ್ಲಸ್ಟರ್ ನ ಕಾರಿಗನೂರು ಶಾಲೆಯಲ್ಲಿ ಸಮಾಲೋಚನ ಸಭೆ ನಡೆಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿ.ಆರ್.ಪಿ ಹನುಮಂತಪ್ಪ ಇವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಸ್ತುತ ಸಂಸ್ಥೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳನ್ನು ಅನುಷ್ಠಾನ ಮಾಡುವಲ್ಲಿ ಎಸ್ಡಿಎಂಸಿ ಸಬಲೀಕರಣದೊಂದಿಗೆ ಸಮುದಾಯ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ವಿವಿಧ ಚಟುವಟಿಕೆಗಳನ್ನು ಕಳೆದ 2 ವರ್ಷಗಳಿಂದ ಪಡಿ ಸಂಸ್ಥೆ ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಪಡಿ ಸಂಸ್ಥೆ ಮಂಗಳೂರು ತರಬೇತಿ ಸಂಯೋಜಕರಾದ ವಿವೇಕ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯ ರಚನೆಯ ಮಹತ್ವ ಮತ್ತು ಉದ್ದೇಶದ ಕುರಿತು ಮಾಹಿತಿಯನ್ನು ನೀಡಿದರು. ಎಸ್. ಡಿ.ಎಂ.ಸಿ ಸದಸ್ಯರು ಮತ್ತು ಮುಖ್ಯ ಶಿಕ್ಷಕರ ಜೊತೆ ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನದ ಪ್ರಗತಿ ಪರಿಶೀಲನ ಸಭೆಯನ್ನ ಪಡಿ ಸಂಸ್ಥೆಯ ಬೆಂಗಳೂರು ವಿಭಾಗದ ಸುಗಮಕಾರರಾದ ಶ್ರೀನಿವಾಸು ನಡೆಸಿಕೊಟ್ಟರು.
ಕತ್ತಲಗೆರೆ ಕ್ಲಸ್ಟರ್ ಶಾಲೆಯ ಮುಖ್ಯ ಶಿಕ್ಷಕರಾದ ರಾಜೇಂದ್ರ, ವಿಜಯಕುಮಾರ್, ಅಂಜನಮ್ಮ, ಶಿವಕುಮಾರ್ ಮತ್ತು ಸಿದ್ದೇಶ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಭಾಕರ್ ಹಾಲೇಶ್, ನಿರ್ಮಲಾ ಮತ್ತು ಸದಸ್ಯರು, ಪಡಿ ಸಂಸ್ಥೆಯ ತರಬೇತುದಾರರಾದ ರವಿಕುಮಾರ್ ಹಾಗೂ ಕಾರಿಗನೂರು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.