ಕೋಟ: ಭಾರತೀಯ ಸಂಸ್ಕೃತಿಗೆ ವಿಶ್ವದೆಲ್ಲಡೆ ವಿಶೇಷ ಸ್ಥಾನಮಾನವಿದೆ. ಯಕ್ಷಗಾನ ನಮ್ಮ ದೇಶದ ಹಿರಿಮೆಯನ್ನು ಜಗತ್ತಿನಾದಂತ್ಯ ಸಂಸ್ಕೃತಿಯನ್ನು ಪಸರಿಸಬಲ್ಲ ಒಂದು ವಿಶೇಷ ಕಲೆ. ಕರಾವಳಿ ಭಾಗದ ಜನರ ಮನ-ಮನೆಯಲ್ಲೂ ಭಾವನಾತ್ಮಕ ಬೆಸುಗೆ ಹೊಂದಿರುವ ಯಕ್ಷಗಾನ ತನ್ನದೇ ಸ್ಥಾನಮಾನ ಹೊಂದಿದೆ ಎಂದು ಯಕ್ಷಗಾನ ಸಂಘಟಕ, ರಂಗಭೂಮಿ ಕಲಾವಿದ ಪ್ರಸಾದ್ ಬಿಲ್ಲವ ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ (ರಿ) ಉಡುಪಿ ಇವರ ಆಶ್ರಯದಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಮೇ 2 ರಿಂದ 7 ರ ವರೆಗೆ ನಡೆಯುವ ಯಕ್ಷ ನೃತ್ಯ ರೂಪಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಿಗೆ ಯಕ್ಷಗಾನದ ಕಲಿಯುವಿಕೆಯಿಂದ ವಿಶೇಷ ಜ್ಞಾನ ವೃದ್ಧಿಯಾಗಲಿದೆ ಎಂದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಶಿಬಿರದ ಸಂಪನ್ಮೂಲ ವ್ಯಕ್ತಿ ಸಂಗೀತಾ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.