ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶ ಪುಣ್ಯೋತ್ಸವದ ಅಂಗವಾಗಿ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ, ಪಂಚ ಸಹಸ್ರ ಯಾಗ, 108 ಕಲಶಾಭಿಷೇಕ, ನಾಗಮಂಡಲ ಸೇವೆ ಅದ್ದೂರಿಯಾಗಿ ನಡೆಯಿತು.
ದೇವಳದ ತಂತ್ರಿಗಳಾದ ರಾಘವೇಂದ್ರ ತಂತ್ರಿ ಹಾಗೂ ಅರ್ಚಕರಾದ ನರಸಿಂಹ ಉಪಾಧ್ಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ನಾಗಪಾತ್ರಿ ಕಲಂಗಳ ರಾಮಚಂದ್ರ ಕುಂಜಿತ್ತಯ, ಕೃಷ್ಣಪ್ರಸಾದ ವೈದ್ಯ, ಬಾಲಕೃಷ್ಣ ವೈದ್ಯ, ನಟರಾಜ್ ವೈದ್ಯ ತಂಡದವರು ನಾಗಮಂಡಲೋತ್ಸವದಲ್ಲಿ ಸಹಕರಿಸಿದರು.
ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಗೌರವಾಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್, ಶಾಸಕ ಲಾಲಾಜಿ ಆರ್ ಮೆಂಡನ್, ಜಯ ಸಿ ಕೋಟ್ಯಾನ್, ಗುಂಡು ಬಿ. ಅಮೀನ್, ಯಶ್ಪಾಲ್ ಸುವರ್ಣ, ಯು.ಆರ್. ಸಭಾಪತಿ, ವಾಸುದೇವ ಸಾಲ್ಯಾನ್, ಸುಭಾಶ್ಚಂದ್ರ ಕಾಂಚನ್, ಶಂಕರ್ ಸಾಲ್ಯಾನ್, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಸತೀಶ್ ಅಮೀನ್, ನಾರಾಯಣ ಸಿ ಕರ್ಕೇರ, ಸುಧಾಕರ ಕುಂದರ್, ವಿನಯ್ ಕರ್ಕೇರ ಮಲ್ಪೆ, ಶಿವಕುಮಾರ್ ಎರ್ಮಾಳ್, ಭರತ್ ಎರ್ಮಾಳ್, ಮೋಹನ್ ಕರ್ಕೇರ ತೋನ್ಸೆ, ಬಿ.ಜೆ. ಶ್ರೀಯಾನ್ ಕುಳೂರು, ಅಪ್ಪಿ ಎಸ್ ಸಾಲ್ಯಾನ್ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.