ಮಣಿಪಾಲ: ರೋಟರಿ ಕ್ಲಬ್ ಮಣಿಪಾಲ ಹಾಗೂ ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ ಬೆಂಗಳೂರು ಮತ್ತು ಪೇಜಾವರ ಮಠ ಉಡುಪಿ ಇವರುಗಳ ಸಹಯೋಗದಲ್ಲಿ ಉಚಿತ ಜೈಪುರ್ ಕೃತಕ ಕಾಲು ಜೋಡನಾ ಶಿಬಿರ ರೋಟರಿ ಕ್ಲಬ್ ಮಣಿಪಾಲದ ಆವರಣದಲ್ಲಿ ಶುಕ್ರವಾರ ನಡೆಯಿತು. ಸುಮಾರು 20 ಲಕ್ಷ ವೆಚ್ಚದ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಟಿ.ಎಂ.ಎ ಪೈ ಪ್ರತಿಷ್ಠಾನನದ ಕಾರ್ಯದರ್ಶಿ ಅಶೋಕ್ ಪೈ ಅವರು ರೋಟರಿ ಕ್ಲಬ್ ಮಣಿಪಾಲದ ಸಮಾಜ ಸೇವಾ ಚಟುವಟಿಕೆಗಳನ್ನು ಪ್ರಶಂಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಶುಭ ಹಾರೈಸಿದರು. ಬಿ ಎಂ ವಿ ಎಸ್.ಎಸ್ ಮುಖ್ಯಸ್ಥರಾದ ಅನಿಲ್ ಸುರಾನ, ಡಾ. ಗಿರಿಜಾ ರಾವ್, ನಿಯೋಜಿತ ಜಿಲ್ಲಾ ಗವರ್ನರ್ ಡಾ. ಗೌರಿ, ಡಾ. ಸುರೇಶ್ ಶೆಣೈ, ಅಮಿತ್ ಅರವಿಂದ್, ರಾಜವರ್ಮ ಅರಿಗ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿ, ರೇಣು ಜಯರಾಂ ನಿರೂಪಿಸಿದರು. ಶಿಬಿರಕ್ಕೆ 500 ಜನ ನೊಂದಣಿ ಮಾಡಿದ್ದು, 100ಕ್ಕೂ ಹೆಚ್ಚು ಫಲಾನುಭವಿಗಳು ಮೊದಲ ದಿನ ಭಾಗವಹಿಸಿದ್ದರು. ಈ ಶಿಬಿರ 5 ದಿನಗಳ ಕಾಲ ನಡೆಯಲಿದೆ.