Saturday, November 23, 2024
Saturday, November 23, 2024

ಅಲಕ್ಷಿತ ಬುಡಕಟ್ಟುಗಳು ಪ.ಪಂಗಡ ಪಟ್ಟಿಗೆ ಸೇರಬೇಕು: ಡಾ. ದುಗ್ಗಪ್ಪ ಕಜೆಕಾರ್

ಅಲಕ್ಷಿತ ಬುಡಕಟ್ಟುಗಳು ಪ.ಪಂಗಡ ಪಟ್ಟಿಗೆ ಸೇರಬೇಕು: ಡಾ. ದುಗ್ಗಪ್ಪ ಕಜೆಕಾರ್

Date:

ಉಡುಪಿ: ಉಡುಪಿ ಜಿಲ್ಲೆಯ ಕುಡುಬಿ ಸಮುದಾಯ, ಉತ್ತರ ಕನ್ನಡದ ಹಾಲಕ್ಕಿ ಸಮುದಾಯ ಹಾಗೂ ದಕ್ಷಿಣ ಕನ್ನಡದ ಚೆನ್ನದಾಸ ಸಮುದಾಯ ಬುಡಕಟ್ಟು ಸಮುದಾಯಗಳ ಆಚರಣೆ, ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿದ್ದ ಅವರುಗಳನ್ನು ಪ. ಪಂಗಡಕ್ಕೆ ಸೇರಿಸುವ ಅನಿವಾರ್ಯತೆಯಿದೆ.

ಈ ಸಮುದಾಯಗಳು ಕರ್ನಾಟಕ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಕಾರಣಾಂತರಗಳಿಂದ ಪ್ರವರ್ಗ 1 ರಲ್ಲಿ ಜಾತಿಗಳಾಗಿ ಪರಿಗಣಿಸಲ್ಪಟ್ಟಿವೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ದುಗ್ಗಪ್ಪ ಕಜೆಕಾರ್ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಶಿವಮೊಗ್ಗ, ಐಕ್ಯೂಎಸಿ, ಸಮಾಜಶಾಸ್ತ್ರ ವಿಭಾಗ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ‍ೀಯ ಜನಜಾತಿ ದಿವಸದ ಅಂಗವಾಗಿ ಬುಧವಾರ ನಡೆದ ’ಬುಡಕಟ್ಟು ಜನಾಂಗ- ಸಂಸ್ಕೃತಿ ಮತ್ತು ತಲ್ಲಣಗಳು’ ಜಾಲಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಪ್ರತಿ ಬುಡಕಟ್ಟು ಭಾಷೆ, ಸಂಸ್ಕೃತಿ, ಉಡುಗೆ, ಆಹಾರ ಕ್ರಮದಲ್ಲಿ ವಿಭಿನ್ನವಾಗಿವೆ. ಅವುಗಳನ್ನು ನಾವು ಒಂದಕ್ಕೊಂದು ಹೋಲಿಸಬಾರದು.

ಅಲ್ಲದೇ ಬುಡಕಟ್ಟುಗಳಿಗೆ ಜಾತಿ- ಧರ್ಮವಿಲ್ಲ. ಸಾಂಸ್ಕೃತೀಕರಣದ ಪ್ರಭಾವದಿಂದ ಕೆಲವೊಂದು ಬುಡಕಟ್ಟುಗಳು ಹಿಂದೂ ಧರ್ಮದ ಜಾತಿ ಧರ್ಮದ ಬಣ್ಣ ಪಡೆಯುತ್ತಿವೆ ಎಂದರು.

ಬಿ.ಎನ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಾಂಡೇಲಿ ಇದರ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಎಸ್.ಎಸ್. ಹಿರೇಮಠ ಮಾತನಾಡಿ, ಸಿದ್ಧಿ ಸಮುದಾಯದ ಸಂಸ್ಕೃತಿ, ಭಾಷೆ ಹಾಗೂ ಅವರ ಕಸುಬುಗಳ ಬಗ್ಗೆ ವಿವರವಾಗಿ ಮಾತನಾಡಿದರು. ಸಿದ್ಧಿಗಳ ವಲಸೆ ಹಾಗೂ ಹಿನ್ನಲೆಗಳ ಬಗ್ಗೆ ಕೂಡ ಪರಿಚಯಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಪ್ರಾಂಶುಪಾಲರಾದ ಡಾ. ಶೇಖರ್ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ವಿಶ್ಲೇಷಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಮಂಜುಳಾ ಟಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜ್ಞಾನಸುಧಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಉಡುಪಿ, ನ.23: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು ಯೋಜನೆ

ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ...

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...
error: Content is protected !!