ಕೋಟ: ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕ ಅನಾವರಣ ಕಾರ್ಯಕ್ರಮ ಕೋಟ ಪದ್ಮನಾಭ ಕಿಣಿ ಗೃಹದಲ್ಲಿ ನಡೆಯಿತು.
ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಕೋಟ ಪದ್ಮನಾಭ ಕಿಣಿ ಇವರ ಸೇವೆ ಸ್ಮರಣಾರ್ಥ ಸ್ವರಾಜ್ಯ 75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು, ಹಸ್ತ ಚಿತ್ತ ಫೌಂಡೇಶನ್, ಜೈ ಕುಂದಾಪುರ ಸೇವಾ ಟ್ರಸ್ಟ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಯ ನಾಮಫಲಕವನ್ನು ದೇವದತ್ ಭಟ್ ಅನಾವರಣಗೊಳಿಸಿದರು
ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ ಕೋಟ ಅವರ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಪುಂಡಲಿಕ್ ಮೊಗವೀರ, ದಯಾನಂದ ಕಿಣಿ, ಶರ್ಮಿಳಾ ಎಸ್ ಕಾರಂತ್, ಶ್ರೀಶಾಸ್ತ ಮೊಬೈಲ್ ನ ಮಾಲಕರಾದ ಆದಿತ್ಯ ಭಾಗವಹಿಸಿದರು. ಚಂದ್ರ ಆಚಾರ್ಯ ಕೋಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಕ್ಷತಾ ಗಿರೀಶ್ ಐತಾಳ್, ರಾಘವೇಂದ್ರ ಹರ್ಕಾಡಿ, ಸತೀಶ್ ಆಚಾರ್ಯ ಗುಂಡ್ಮಿ ಉಪಸ್ಧಿತರಿದ್ದರು
ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಸ್ತಾವಿಕವಾಗಿ ಮಾತನಾಡಿದರು.
ಆಶಾಲತಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ಆಚಾರ್ಯ ಧನ್ಯವಾದಗೈದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.