ಉಡುಪಿ: ಕೋಟದಲ್ಲಿ ಸಂಭವಿಸಿದ ಘಟನೆಯ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರು, ಘಟನೆಗೆ ಸಂಬಂಧಿಸಿದಂತೆ ಎಸ್.ಐ ಸಹಿತ 6 ಪೊಲೀಸ್ ಸಿಬ್ಬಂದಿಗಳನ್ನು ಕೋಟ ಠಾಣೆಯಿಂದ ತನಿಖೆ ನಡೆಸುವ ಸಲುವಾಗಿ ಸ್ಥಳಾಂತರ ಮಾಡಲಾಗಿದೆ. ತನಿಖೆ ಮುಕ್ತಾಯಗೊಳ್ಳುವವರೆಗೂ ಅವರೆಲ್ಲರೂ ಕೋಟ ಠಾಣೆಯಲ್ಲಿ ಸೇವೆಯಲ್ಲಿರುವುದಿಲ್ಲ.
ಲೌಡ್ ಮ್ಯೂಸಿಕ್ ಕೇಳಿಬರುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಬಳಿಕ ಕೋಟ ಠಾಣೆಯ ಪೊಲೀಸರು 10 ಗಂಟೆ ಆಗಿರುವ ಕಾರಣ ಮ್ಯೂಸಿಕ್ ಬಂದ್ ಮಾಡಲು ಸೂಚನೆ ನೀಡಿದ್ದರು.
ಅವಧಿ ಮೀರಿ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಕೋಟ ಠಾಣೆಗೆ ಮಾಹಿತಿ ನೀಡಿದಾಗ ಪಿ.ಎಸ್.ಐ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ತೆರಳಿದರು.
ಲಾಠಿ ಚಾರ್ಜ್ ಬಗ್ಗೆ ಕೊರಗ ಸಮುದಾಯದವರು ಆರೋಪ ಮಾಡಿದ್ದು ಇದರ ಬಗ್ಗೆ ಡಿ.ವೈ.ಎಸ್.ಪಿ ಅವರಿಗೆ ಸೂಕ್ತ ತನಿಖೆ ನಡೆಸಲು ತಿಳಿಸಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಹೇಳಿದರು. ಎ.ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.