ಬಂಟ್ವಾಳ: ತೆಂಕುತಿಟ್ಟಿನ ಮೇರುವ್ಯಕ್ತಿತ್ವದ ಭಾಗವತ ಪದ್ಯಾಣ ಗಣಪತಿ ಭಟ್ ಇಂದು ವಿಧಿವಶರಾದರು.
ಕಳೆದ ಐದು ದಶಕಗಳಿಂದಲೂ ಭಾಗವತರಾಗಿ ಯಕ್ಷಾಭಿಮಾನಿಗಳಿಗೆ ರಸದೌತಣ ಉಣಬಡಿಸಿ ತೆಂಕುತಿಟ್ಟಿನಲ್ಲಿ ಪದ್ಯಾಣ ಶೈಲಿಯನ್ನು ಹುಟ್ಟುಹಾಕಿದ ಪದ್ಯಾಣರು, ಹಲವಾರು ಮೇಳಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದರು.
ಹನುಮಗಿರಿ, ಎಡನೀರು, ಹೊಸನಗರ ಮುಂತಾದ ಮೇಳಗಳಲ್ಲಿ ಪದ್ಯಾಣ ಗಣಪತಿ ಭಟ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಸುಮಾರು ಎರಡೂವರೆ ದಶಕಗಳ ಕಾಲ ಸುರತ್ಕಲ್ ಮೇಳದಲ್ಲಿ ಭಾಗವತರಾಗಿ ಕಲಾ ಸೇವೆಯನ್ನು ಗಣಪತಿ ಭಟ್ ಸಲ್ಲಿಸಿದ್ದರು.