ಸಾಣೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಕ ಮಂಡಲ (ರಿ.) ಸಾಣೂರು ಇದರ ಸ್ವಚ್ಛ ಸಾಣೂರು ತಂಡದಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಪ್ರತಿ ಆದಿತ್ಯವಾರ ಸ್ವಚ್ಚತಾ ಸಾಪ್ತಾಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಇಂದಿನ ಸ್ವಚ್ಛತಾ ಅಭಿಯಾನ ಸಾಣೂರು ಗುತ್ತು ರಸ್ತೆಯಿಂದ ಗಾಂದ್ಯೋಟ್ಯ ವರೆಗೆ ನಡೆಯಿತು.
ಸಾಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ. ಸಿ ತೆಂಗಿನಕಾಯಿ ಒಡೆಯುವುದರ ಮೂಲಕ ಸ್ವಚ್ಛತಾ ಸಾಪ್ತಾಹಿಕಕ್ಕೆ ಚಾಲನೆ ನೀಡಿದರು.
ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ದೇವಾನಂದ್ ಶೆಟ್ಟಿ, ಜಗದೀಶ್ ಕುಮಾರ, ಶಂಕರ್ ಶೆಟ್ಟಿ ಕೋಲ್ಡ್ರೋಟ್ಟು, ಪ್ರಕಾಶ್ ಮಡಿವಾಳ ಜೊತೆ ಕಾರ್ಯದರ್ಶಿಗಳಾದ ಪ್ರಮಿತ್ ಸುವರ್ಣ, ಪ್ರಕಾಶ್ ರಾವ್ ಕ್ರೀಡಾ ಕಾರ್ಯದರ್ಶಿಗಳಾದ ಹರೀಶ್ ರಾವ್, ರೋಹಿತ್ ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ ಕೋಶಾಧಿಕಾರಿ ರಾಜೇಶ್ ಪೂಜಾರಿ ಪದಾಧಿಕಾರಿಗಳಾದ ಸತೀಶ್ ಮಡಿವಾಳ, ಅಬ್ದುಲ್ ದಿಲೀಪ್, ಪ್ರಸನ್ನ ಆಚಾರ್ಯ, ಸುಮಂತ್, ಜಿತೇಶ್, ರಮೇಶ್ ಪೂಜಾರಿ, ಸೀತಾರಾಮ್, ಸುಮುಖ್ ನಾಯಕ್ ಮೊದಲಾದವರು ಪಾಲ್ಗೊಂಡಿದ್ದರು.